Google search engine
ಮನೆUncategorizedಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅವಶ್ಯಕ: ಕಲಿಕಾ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಪೋಷಕರ ಸಹಕಾರ ಅತ್ಯಗತ್ಯ;ಭಂವರ್ ಸಿಂಗ್

ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅವಶ್ಯಕ: ಕಲಿಕಾ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಪೋಷಕರ ಸಹಕಾರ ಅತ್ಯಗತ್ಯ;ಭಂವರ್ ಸಿಂಗ್

ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅವಶ್ಯಕ: ಕಲಿಕಾ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಪೋಷಕರ ಸಹಕಾರ ಅತ್ಯಗತ್ಯ;ಭಂವರ್ ಸಿಂಗ್

ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅವಶ್ಯಕ: ಕಲಿಕಾ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಪೋಷಕರ ಸಹಕಾರ ಅತ್ಯಗತ್ಯ;ಭಂವರ್ ಸಿಂಗ್ ಮೀನಾ ಕಲಬುರಗಿ,ನ.14(ಕರ್ನಾಟಕ ವಾರ್ತೆ) ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅತೀ ಅವಶ್ಯಕವಾಗಿದೆ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಕಲಿಕೆಗೆ ಮಕ್ಕಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಕಲಿಕಾ ಸ್ನೇಹಿ ವಾತಾವರಣ ನಿರ್ಮಿಸಲು ಶಿಕ್ಷಕರಿಗೆ ಪೋಷಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಹೇಳಿದರು. ಕಲಬುರಗಿ ಉತ್ತರ ವಲಯದ ವ್ಯಾಪ್ತಿಗೆ ಬರುವ ಕಲಬುರಗಿ ತಾಲೂಕಿನ ತಾಜ್ ಸುಲ್ತಾನಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ 2025-26ನೇ ಸಾಲಿನ ಪೋಷಕ-ಶಿಕ್ಷಕರ ಮಹಾಸಭೆಯಲ್ಲಿ ಭಾಗವಹಿಸಿ ಪೋಷಕರ ಅಹವಾಲು ಆಲಿಸಿ ಮಾತನಾಡಿದ ಅವರು, ಪೋಷಕರಾದವರು ಅಗಾಗ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕಾ ಆಸಕ್ತಿ, ಪ್ರಗತಿ ಕುರಿತು ಬಗ್ಗೆ ವಿಚಾರಿಸಬೇಕು ಎಂದರು. ಮಕ್ಕಳ ದಿನಾಚಾರಣೆಯ ಪ್ರಯುಕ್ತ ಸರ್ಕಾರಿ ಶಾಲೆಗಳ ಪ್ರಮುಖ ಪಾಲುದಾರರನ್ನು ತಲುಪಲು ರಾಜ್ಯಾದ್ಯಂತ ಇಂದು ಏಕಕಾಲದಲ್ಲಿ ಮಹಾಸಭೆ ನಡೆಸಲಾಗುತ್ತಿದೆ. ಮಕ್ಕಳ ಎದುರಿಸುತ್ತೊರುವ ಸಮಸ್ಯೆಗಳು, ಕಲಿಕೆಯಲ್ಲಿ ಗುಣಮಟ್ಟ, ಮೂಲಸೌಕರ್ಯ ಬಲಪಡಿಸುವ ನಿಟ್ಟಿನಲ್ಲಿ ಪೋಷಕರ ಅಹವಾಲು ಆಲಿಸಲು ಇಂದಿಲ್ಲಿ ಸಭೆ ಕರೆಯಲಾಗಿದೆ ಎಂದ ಅವರು, ಸರ್ಕಾರಿ ಶಾಲೆ ಶಿಕ್ಷಕರು ಸ್ಫರ್ಧಾತ್ಮಕ ಪರೀಕ್ಷೆ ಬರೆದು ಬಂದಿದ್ದಾರೆ. ಖಾಸಗಿ ಶಾಲೆಕ್ಕಿಂತ ಪ್ರತಿಭಾವಂತರಿದ್ದು, ಪ್ರತಿಯೊಬ್ಬ ತಂದೆ-ತಾಯಿಗಳು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕೆಂದು ಕರೆ ನೀಡಿದರು. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಜೊತೆಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತದೆ. ಬಿಸಿಯೂಟ ನೀಡುವಲ್ಲಿ ಮೊದಲಿಗ್ಗಿಂತ ಇದೀಗ ಹೆಚ್ಚಿನ ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಬಾಳೆ ಹಣ್ಣು, ಮೊಟ್ಟೆ ಸಹ ವಿತರಿಸಲಾಗುತ್ತಿದೆ. ಖಾಸಗಿ ಶಾಲೆಯಲ್ಲಿ ಇದೆಲ್ಲ ಸಿಗುವುದಿಲ್ಲ, ಪಾಲಕರು, ಪೋಷಕರು ಇದನ್ನು ಅರಿಯಬೇಕು. ಮಕ್ಕಳ ಶಾಲೆಯಿಂದ ಹೊರಗುಳಿಯದಂತೆ ಎಚ್ಚರ ವಹಸಿಬೇಕು ಎಂದರು. ಕಾಯರ್ಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಕೀಲ ಅಲ್ಲಾಹುದ್ದಿನ್ ಅವರು ಕಾನೂನಿನ ಅರಿವು, ಪೋಕ್ಸೋ ಕಾಯ್ದೆಯ ಬಗ್ಗೆ ಮಾತನಾಡಿದರು, ಮುಖ್ಯ ಗುರುಗಳಾದ ಡಾ. ವಿಠ್ಠಲ್ ವಗ್ಗನ್ ಅವರು ಆರ್.ಟಿ.ಇ ಕಾಯ್ದೆ ಬಗ್ಗೆ ತಿಳಿಹೇಳಿದರು. ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರ್ ಹಂಚನಾಳ, ಶಂಕ್ರಮ್ಮ ಢವಳಗಿ, ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜುಕುಮಾರ್ ಜವಳಕರ, ಸದಸ್ಯೆ ಸರಸ್ವತಿ ಸೇರಿದಂತೆ ಊರಿನ ಗಣ್ಯರು, ಪಾಲಕ-ಪೋಷಕರು ಭಾಗವಹಿಸಿದ್ದರು. ಅರವಿಂದ ಸೀತಾಳೆ ನಿರೂಪಿಸಿದರು. ಜಯಶ್ರೀ ಸಜ್ಜನ ಸ್ವಾಗತಿಸಿದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!