ಸೂಫಿ ಸಂತರ ದೃಷ್ಟಿಯಲ್ಲಿ ಅಲ್ಲಾನ ಸೃಷ್ಟಿ ಅಮೂಲ್ಯ : ಪ್ರೊ ಅಬ್ದುಲ್ ಹಮೀದ್ ಅಕ್ಬರ ಕಲಬುರಗಿ: ಭಾರತದಲ್ಲಿ ಸೂಫಿ ಸಂಪ್ರದಾಯದ ಇತಿಹಾಸ ಶತಮಾನಗಳಷ್ಟು ಹಳೆಯದು. ಸೂಫಿ ಸಂತರು ಮೃದುಸ್ವಭಾವಿಗಳು. ಅಲ್ಲಾನ ಸಕಲ ಸೃಷ್ಟಿಯೂ ಅವರಿಗೆ ಅಮೂಲ್ಯವಾಗಿದೆ. ಅವರಲ್ಲಿ ಜಾತಿ, ಧರ್ಮ ಅಥವಾ ಲಿಂಗದ ಬೇಧವಿಲ್ಲ ಎಂದು ಕೆಬಿಎನ್ ವಿಶ್ವವಿದ್ಯಾಲಯದ ಉರ್ದು ವಿಭಾಗದ ಮುಖ್ಯಸ್ಥ ಪ್ರೊ.ಅಬ್ದುಲ್ ಹಮೀದ್ ಅಕ್ಬರ ಹೇಳಿದರು. ಅವರು ಮಂಗಳವಾರ ಎಸ್ಎಸ್ಎಫ್ ಆಯೋಜಿಸಿದ್ದ ಸಾಹಿತ್ಯ ಉತ್ಸವದ ಭಾಗವಾದ “ಹಜರತ್ ಖಾಜಾ ಬಂದಾ ನವಾಜರ ಆತ್ಮೀಯ ಪರಂಪರೆ ಮತ್ತು ಭಾರತದಲ್ಲಿ ಸೂಫಿ ಚಳವಳಿ” ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ವ್ಯಾಪಾರ ಮಾರ್ಗಗಳ ಮೂಲಕ ಸೂಫಿವಾದವೂ ಉಪಖಂಡಕ್ಕೆ ಪ್ರವೇಶಿಸಿತು. ಬಳಿಕ ಹಜರತ್ ನಿಜಾಮುದ್ದೀನ್ ಮಹಬೂಬೆ ಇಲಾಹಿ, ಹಜರತ್ ಖ್ವಾಜಾ ಫರೀದುದ್ದೀನ್ ಗಂಜ್ ಶಕರ್, ಹಜರತ್ ಪೀರ್ ನಸೀರುದ್ದೀನ್ ಚಿರಾಗ್ ದೆಹಲವಿ ಮತ್ತು ಹಜರತ್ ಖಾಜಾ ಬಂದೆ ನವಾಜರ ಕಾಲದಲ್ಲಿ ಇದಕ್ಕೆ ಮತ್ತಷ್ಟು ಬಲ ಸಿಕ್ಕಿತು. ಭಾರತದಲ್ಲಿ ಇಸ್ಲಾಂ ಧರ್ಮದ ಪ್ರಸಾರದಲ್ಲಿ ಸೂಫಿವಾದವು ಮಹತ್ತರ ಪಾತ್ರವಹಿಸಿದೆ. ಅಲ್ಲದೇ ಹಜರತ ಖಾಜಾ ಬಂದೆ ನವಾಜರ ಕಾಲದಲ್ಲಿ ಸೂಫಿವಾದವು ಅತ್ಯಂತ ಶ್ರೇಷ್ಟ ಹಂತ ತಲುಪಿತು. ಬಂದಾ ನವಾಜರ ಆಗಮನದಿಂದ ಗುಲ್ಬರ್ಗಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಯಿತು. ಇಂದಿಗೂ ಹಜರತ್ ಖ್ವಾಜಾ ಬಂಡೆ ನವಾಜರ ವಂಶಜರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಗುಲ್ಬರ್ಗಾದ ಹೆಸರನ್ನು ಮುಂದುವರೆಸುತ್ತಿದ್ದಾರೆ. ಬಂದೆ ನವಾಜರ ಮಿಷನ್ ಅನ್ನು ಅವರು ಸ್ಥಳೀಯ ಮಟ್ಟಕ್ಕೆ ಸೀಮಿತಗೊಳಿಸದೆ, ಜಾಗತಿಕ ಮೌಲ್ಯ ನೀಡಿದರು ಎಂದು ಹೇಳಿದರು. ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕರದ ಅಪ್ಪಗಿರಿ ಸೋಮಶೇಖರ ಉದ್ಘಾ ಟಿಸಿ ಮಾತನಾಡುತ್ತ, ಕಲ್ಯಾಣ ಕರ್ನಾಟಕದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯ ಇನ್ನೂ ಇದೆ ಏಕೆಂದರೆ ಇಲ್ಲಿ ಸೂಫಿ ಸಂತರು ಮತ್ತು ಶರಣರು ನೆಲೆಸಿದ್ದರು. ಸೂಫಿ ಸಂತರಾದ ಬಂದೆ ನವಾಜರ ಕೊಡುಗೆ ಬಹಳವಿದೆ. ಸೂಫಿ ಎಂದರೆ ಜ್ಞಾನ. ಸೂಫಿ ಮತ್ತು ತತ್ವ ಪದಗಳನ್ನು ಅಧ್ಯಯನ ಮಾಡಿದರೆ ಬಹಳಷ್ಟು ಸಾ ಮ್ಯತೆಗಳಿವೆ. ಸೂಫಿ ಸಂತರು ತಮ್ಮ ಅಗತ್ಯ ಕ್ಕಿಂತ ಹೆಚ್ಚಿನ ಸಂಗ್ರಹ ಮಾಡುವುದಿಲ್ಲ. ಇದನ್ನೇ ಬುದ್ಧ ಕೂಡ ಹೇಳಿದ್ದು. ಸೂಫಿಗಳು ಲೋಕ ಜ್ಞಾನ ಹೊಂದಿದ್ದಾರೆ. ಪ್ರೀತಿಯೇ ಭೂಮಿ, ಚಂದ್ರ,ನೀರು, ನಕ್ಷತ್ರ, ಹಣ್ಣು, ಹೂವು, ಸೂರ್ಯಎಂದು ಬಂದೆ ನವಾಜ್ರು ಹೇಳಿದ್ದಾರೆ. ಕಬೀರ, ನಾಮದೇವ, ತುಕಾರಾಂ, ಗುರುನನಕ್, ಕೂಡ ಸೂಫಿ ಪರಂಪರೆ ಇಂದ ಪ್ರಭಾವಿತರಾದವರು. ಸೂಫಿ ಪ್ರಪಂರೇಯ ಪ್ರಕಾರ ಎಲ್ಲ ಮನುಷ್ಯರು ದೇವರ ಮಕ್ಕಳು ಹಾಗೂ ಸಮಾನರು. ಸೂಫಿ ಪರಂಪರೆ, ಜ್ಯಾತ್ಯತೀತ ಮತ್ತು ಧರ್ಮತೀತ ಎನ್ನುವುದಕ್ಕೆ ಬಬಲಾದಿ ಸಿದ್ಧ, ಕೊಡೇಕಲ ಬಸವಣ್ಣ, ಶಿರಹಟ್ಟಿ ಫಕಿ ರೇಶ,ಸಾವಳಗಿ ಸಿದ್ಧಲಿಂಗ ಸಾಕ್ಷಿ. ಭಾರತ ಇಂದಿಗೂ ಸಹ ಧರ್ಮ ಸಹಿಷ್ಣುತೆ, ಸಾಮಾಜಿಕ ಸಾಮರಸ್ಯ ಇರುವುದೇ ಇಂತಹ ಸಂತರಿಂದ. ಹಿಂದೂ ಮುಸ್ಲಿಂ ಸಾಮರಸ್ಯ ವಿರುವ ಗುರು ಶಿಷ್ಯರ ಸಂಬಂಧಗಳನ್ನು ಕಾಣ ಬಹುದು. ಸೂಫಿ ಸಂತರ ಚಿಂತನೆ ಗಳನ್ನು ಅರ್ಥ ಮಾಡಿಕೊಂಡರೆ ವರ್ತಮಾನದ ಬಿಕ್ಕಟ್ಟುಗಳಿಗೆ ಪರಿಹಾರ ಕಂಡು ಕೊಳ್ಳಬಹುದು ಎಂದರು. ರಿಯಾಜ ಅಹ್ಮದ ಗೋಡೆ ಮಾತನಾಡುತ್ತ, ಇದು ರಾಷ್ಟ್ರಮಟ್ಟದ ಮಹತ್ವದ ವಿಚಾರ ಸಂಕಿರಣ. ಬಂದೆನವಾಜರ ವ್ಯಕ್ತಿತ್ವ ಅತಿ ಶ್ರೇಸ್ಟ. ಅವರದು ಅಪರಿಮಿತ ಪಂಡಿತ್ಯ ಎಂದು ಅನೇಕ ಉದಾಹರಣೆ ಗಳೊಂದಿಗೆ ಹೇಳಿದರು. ಗುಲ್ಬರ್ಗಾ ವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು ಬಂದಾನವಾಜರು. ಬಂದಾ ನವಾಜರ ಜೀವನ ಚರಿತ್ರೆಯ ಕಿರು ಪರಿಚಯ ನೀಡಿದರು. ಅಲ್ಲದೇ ಸೂಫಿಗಳು ಅತಿ ಸಣ್ಣ ಘಟನೆ ಗಳನ್ನು ಕೂಡ ನಮೂದಿಸಿರುತ್ತಾರೆ. ಆದರೆ ದುರದೃಶ್ಯವಶಾತ ಅವು ನಮಗೆ ಸುಲಭವಾಗಿ ಲಭ್ಯ ವಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಬಂದಾ ನವಾಜರ ಇನ್ನೂ ಅನೇಕ ಪುಸ್ತಕಗಳು ಕನ್ನಡಕ್ಕೆ ತುರ್ಜುಮೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ದಕ್ಕನಿ ಭಾಷೆಯ ಮೊದಲ ಕೃತಿ ‘ಮಿರಾಜುನ ನ ಆಶಕಿನ’ ರಚಿಸುದ್ದೆ ಬಂದಾ ನವಾಜರು ಎಂದು ಹೇಳಿ ಗುಲ್ಬರ್ಗಾಕ್ಕೆ ಅವರು ನೀಡಿದ ಕೊಡುಗೆಗಳನ್ನು ನೆನೆದರು. ನವೆಂಬರ 14, 15 ಮತ್ತು 16 ರಂದು ಎಸ್ ಎಸ್ ಎಫ ವತಿಯಿಂದ ರಾಷ್ಟಮಟ್ಟದ ಸಾಹಿತ್ಯೋತ್ಸವ ನಡೆಯಲಿದೆ. 100 ಕ್ಕಿಂತಲೂ ಹೆಚ್ಚಿನ ಸ್ಪರ್ಧೆಗಳಿವೆ ಎಂದರು. ದೇಶದ ಎಲ್ಲೆಡೆಯಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಎಸ ಎಸ ಎಫ ಭಾರತದ ರಾಷ್ಟ್ರೀಯ ಕಾರ್ಯದರ್ಶಿ ದಿಲ್ಶಾದ್ ಅಹಮದ ಹೇಳಿದರು. ಮೌಲಾನಾ ಹ್ಯಾರಿಸ್ ಮೊಯಿನಿ ಪ್ರಾರ್ಥಿಸಿದರೆ, ಮುಹಮ್ಮದ್ ಅಬುಝರ್ ನಾತ ಪ್ರಸ್ತುತ ಪಡಿಸಿದರು. ಎಸ ಎಸ ಎಫ ಭಾರತದ ರಾಷ್ಟ್ರೀಯ ಕಾರ್ಯದರ್ಶಿ ದಿಲ್ಶಾದ್ ಅಹಮದ ವಂದಿಸಿದರು. ಎಸ್ ಎಸ್ ಎಫ್ ಗುಲ್ಬರ್ಗ ಜಿಲ್ಲಾಧ್ಯಕ್ಷರು ಯೂಸುಫುದ್ದೀನ್ ಸರ್ಮಸ್ತ ನಿರೂಪಿದರು. ಈ ಸಂದರ್ಭದಲ್ಲಿ ಕೆಬಿಎನ ವಿವಿಯ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಜರಿದ್ದರು
ಸೂಫಿ ಸಂತರ ದೃಷ್ಟಿಯಲ್ಲಿ ಅಲ್ಲಾನ ಸೃಷ್ಟಿ ಅಮೂಲ್ಯ : ಪ್ರೊ ಅಬ್ದುಲ್ ಹಮೀದ್ ಅಕ್ಬರ
ಸೂಫಿ ಸಂತರ ದೃಷ್ಟಿಯಲ್ಲಿ ಅಲ್ಲಾನ ಸೃಷ್ಟಿ ಅಮೂಲ್ಯ : ಪ್ರೊ ಅಬ್ದುಲ್ ಹಮೀದ್ ಅಕ್ಬರ





