Home Uncategorized ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಂಚೋಳಿ ತಾಲೂಕಿನ ಮಿರಿಯಾಣ ಚೆಕ್‍ಪೋಸ್ಟಗೆ ಜಿಲ್ಲಾಧಿಕಾರಿ ಭೇಟಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಂಚೋಳಿ ತಾಲೂಕಿನ ಮಿರಿಯಾಣ ಚೆಕ್‍ಪೋಸ್ಟಗೆ ಜಿಲ್ಲಾಧಿಕಾರಿ ಭೇಟಿ

0
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಂಚೋಳಿ ತಾಲೂಕಿನ ಮಿರಿಯಾಣ ಚೆಕ್‍ಪೋಸ್ಟಗೆ ಜಿಲ್ಲಾಧಿಕಾರಿ ಭೇಟಿ

ಚಿಂಚೋಳಿ ತಾಲ್ಲೂಕಿನ ಗಡಿಭಾಗ ಮಿರಿಯಾಣ ಚೆಕ್‌ಪೋಸ್ಟ್‌ಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್‌ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಅಕ್ಷಯ ಕುಮಾರ್ ಹಾಕಯ್ ದಾಖಲೆಗಳ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿಗಳು ಖುದ್ದಾಗಿ ಬಸ್ ಮತ್ತು ಲಾರಿ ಇನ್ನಿತರ ವಾಹನಗಳನ್ನು ತಪಾಸಣೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಚೆಕ್ ಪೋಸ್ಟ್ ಮುಖಂತರ ಹಾದುಹೋಗುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಲೇಬೇಕು ಎಂದು ಸೂಚಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಂಚೋಳಿ ತಾಲೂಕಿನ ಮಿರಿಯಾಣ ಚೆಕ್‍ಪೋಸ್ಟಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಚೆಕ್‍ಪೋಸ್ಟಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ, ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಬರುವ ಎಲ್ಲ ವಾಹನ ತಪಾಸಣೆ ಮಾಡುವಂತೆ ಚೆಕ್‍ಪೋಸ್ಟ್ ಸಿಬ್ಬಂದಿಗೆ ಸೂಚಿಸಿದರು.

ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರುನುಮ್,ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎಮ್ ಅಕ್ಷಯ್ ಕುಮಾರ ಹಾಕಯ್, ಸೇಡಂ ಉಪವಿಭಾಗ ದಂಢಾಧಿಕಾರಿಗಳು ಹಾಶಪ್ಪ ಪೂಜಾರಿ,ತಾಲೂಕ ದಂಡಧಿಕಾರಿ ಮಲ್ಲಿಕಾರ್ಜುನ್ ಅರಕೇರಿ,ಡಿವೈಎಸ್ಪಿ ಸಂಗಮನಾಥ್ ಹಿರೇಮಠ್, ಸಿಪಿಐ ಎಲ್ ಹೆಚ್ ಗೌಂಡಿ , ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ರಾಠೋಡ್,ಮಿರಿಯಾಣ ಪಿಎಸ್ಐ ಶಿವರಾಜ್ ಪಾಟೀಲ, ಅಬಕಾರಿ ಸಿಪಿಐ ಮಲ್ಲಿಕಾರ್ಜುನ್ ಗಸ್ತಿ, ಪಿಡಿಓ ದಶರಥ ಪಾತ್ರೆ, ಆರ್ ಐ ರವಿ ಪಾಟೀಲ ಚಿಟ್ಟ, ರೇವಣಸಿದ್ದು ಸೋಮಲಿಂಗದಳ್ಳಿ,ಜೆಈ ರಾಜಶೇಖರ್,ವಿಏ ರವಿಚಂದ್ರ ಮತ್ತು ಪೊಲೀಸ್ ಸಿಬ್ಬಂದಿಗಳು ಗೃಹ ರಕ್ಷಕ ಸಿಬ್ಬಂದಿಗಳು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here

error: Content is protected !!