Google search engine
ಮನೆUncategorizedಉಮೀದ ಪೋರ್ಟಲ್ ಡಾಟಾ ಅಪ್ಡ್ಲೋಡಿಂಗ್ ಕಾರ್ಯ: ಕರ್ನಾಟಕ ರಾಜ್ಯ ವಕ್ ಅಧ್ಯಕ್ಷ ರಿಂದ ಪರಿಶೀಲನೆ

ಉಮೀದ ಪೋರ್ಟಲ್ ಡಾಟಾ ಅಪ್ಡ್ಲೋಡಿಂಗ್ ಕಾರ್ಯ: ಕರ್ನಾಟಕ ರಾಜ್ಯ ವಕ್ ಅಧ್ಯಕ್ಷ ರಿಂದ ಪರಿಶೀಲನೆ

ಉಮೀದ ಪೋರ್ಟಲ್ ಡಾಟಾ ಅಪ್ಡ್ಲೋಡಿಂಗ್ ಕಾರ್ಯ: ಕರ್ನಾಟಕ ರಾಜ್ಯ ವಕ್ ಅಧ್ಯಕ್ಷ ರಿಂದ ಪರಿಶೀಲನೆ

ಉಮೀದ ಪೋರ್ಟಲ್ ಡಾಟಾ ಅಪ್ಡ್ಲೋಡಿಂಗ್ ಕಾರ್ಯ: ಕರ್ನಾಟಕ ರಾಜ್ಯ ವಕ್ ಅಧ್ಯಕ್ಷ ರಿಂದ ಪರಿಶೀಲನೆ ಕೆಬಿಎನ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಕಂಪ್ಯೂಟರ್ ಲ್ಯಾಬ್ನಲ್ಲಿ ಬುಧವಾರ ಆರಂಭವಾದ UMEED ಕೇಂದ್ರ ಪೋರ್ಟಲ್ (ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ) ಮೂಲಕ ವಕ್ಫ್ gಆಸ್ತಿಗಳ ಡಿಜಿಟಲೀಕರಣ ಮತ್ತು ನಿರ್ವಹಣೆ ಕಾರ್ಯವನ್ನು ಕರ್ನಾಟಕ ರಾಜ್ಯ ವಕ್ಫ ಮಂಡಳಿಯ ಅಧ್ಯಕ್ಷ ರಾದ ಆಫೀಜ ಜನಾಬ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೇನಿಯವರು ಭೇಟಿ ನೀಡಿ ವೀಕ್ಷಣೆ ಮಾಡಿ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದರು. ಸುಮಾರು 45 ಕಂಪ್ಯೂಟರಗಳಲ್ಲಿ ಕೆಲಸ ವೇಗವಾಗಿ ಸಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಈ ಕಾರ್ಯದಲ್ಲಿ ಕೆಬಿಎನ ವಿವಿಯ ವಿದ್ಯಾರ್ಥಿ ಮತ್ತು ಉಪನ್ಯಾಸಕರು ತುಂಬಾ ಉತ್ಸಾಹ ದಿಂದ ಕೆಲಸ ಮಾಡುತ್ತಿದ್ದಾರೆ ಎಂದರು. 3 ಹಂತಗಳಲ್ಲಿ ಡಾಟಾ ಅಪ್ಲೋಡಿಂಗ ಕಾರ್ಯ ನಡೆಯಲಿದ್ದು, ಮೇಕರ ಹಂತ ಕೆಬಿಎನನಲ್ಲಿ ನಡೆದಿದೆ, ಈ ಹಂತ ಬೇಗ ಮುಗಿದರೆ ಇನ್ನುಳಿದ ವೆರಿಫಿಕೇಷನ ಮತ್ತು ಅನುಮೋದನೆ ಹಂತ ಮುಗಿಯುತ್ತವೆ ಎಂದರು. ಕರ್ನಾಟಕ ರಾಜ್ಯದಲ್ಲಿ ಸುಮಾರು 3300 ವಖ್ಫ ಸಂಸ್ಥೆಗಳಿದ್ದು, 36000 ವಾಕ್ಫ ಅಸ್ತಿಗಳಿವೆ ಹಾಗೆಯೇ ಗುಲ್ಬರ್ಗಾ ಜಿಲ್ಲೆಯಲ್ಲಿ 4500 ವಕ್ಫ ಸಂಸ್ಥೆ ಗಳಿದ್ದು 6000 ಅಸ್ತಿಗಳಿವೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಅಪ್ಲೋಡಿಂಗ ಕಾರ್ಯ ಮುಗಿದಿದೆ, ಮಿಕ್ಕ ಭಾಗಗಳಲ್ಲಿ ನಡೆದಿದೆ ಎಂದು ಹೇಳಿದರು. ಕೆಲವು ರಾಜ್ಯಗಳು ಕೇಂದ್ರ ಸರಕಾರಕ್ಕೆ ಕೊನೆಯ ದಿನಾಂಕ ವಿಸ್ತರಿಸುವಂತೆ ಮನವಿ ಮಾಡಿಕೊಂಡಿವೆ, ಸಮಯ ವಿಸ್ತರಣೆಯಾದರೆ ಕೆಲಸ ಇನ್ನೂ ಅಚ್ಚುಕಟ್ಟಾಗಿ ನಡೆಯುತ್ತದೆ ಎಂದರು. ಯಾವುದೇ ಅಸ್ತಿಯ ದಾವೆಯಿದ್ದರೆ ನಾವು ಅದನ್ನು ಈ ಪೋರ್ಟಲನಲ್ಲಿ ದಾಖಲೆ ಮಾಡುತ್ತೇವೆ ಎಂದು ಎಂದು ಜಿಲ್ಲಾ ವಕ್ಫ್ ಅಧಿಕಾರಿ ಅಬ್ದುಲ್ ಮನ್ನಾನ ಹೇಳಿದರು. ಈ ಸಂದರ್ಭದಲ್ಲಿ ಕೆಬಿಎನ ವಿವಿಯ ನಿರ್ದೇಶಕರಾದ ಡಾ ಮುಸ್ತಫಾ ಅಲ ಹುಸ್ಸೇನಿ, ಹಜರತ್ ಅಲಿ ನದಾಫ್- ಜಿಲ್ಲಾ ವ್ಯವಸ್ಥಾಪಕರು ಕೆಎಂಡಿಸಿ ಕಲಬುರಗಿ, ಪರ್ವೇಜ್ ಆಲಂ, ಲೆಕ್ಕ ಪರಿಶೋಧಕ, ಕೆಬಿಎನ ಉಪಕುಲಪತಿ ಪ್ರೊ ಅಲಿ ರಜಾ ಮೂಸ್ವಿ, ಸಮ ಉಪಕುಲಪತಿ ಪ್ರೊ ಅಶಫಾಕ್ ಅಹ್ಮದ, ಕುಲಸಚಿವ ಮಿರ ವಿಲಾಯತ ಅಲಿ, ಡಾ ಆಜಾಮ, ಇಂಜಿನಿಯರಿಗ ಡೀನ್ ಪ್ರೊ ಕಮಲ್, ಡಾ ನಿಖತ ಹಾಜರಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!