ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಆಚರಣೆ…. ಅಂಕರ್: ಸಡಗರ ಸಂಭ್ರಮದಿಂದ ನಾಡಿನಾದ್ಯಂತ ಇಂದು 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದ್ದು, ಕಲಬುರ್ಗಿಯ ಮಹಾನಗರ ಪಾಲಿಕೆ ಯಲ್ಲೂ ಕೂಡ ಮಹಾನಗರ ಪಾಲಿಕೆ ಮೇಯರ್ ವರ್ಷಾ ಆರ್ ಜಾನಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. . . . ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ಮೇಯರ್ ವರ್ಷಾ ಆರ್ ಜಾನಿ’ ಉಪಮೇಯರ್ ತೃಪ್ತಿ ಎಸ್ ಲಾಕೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರದಂತಹ ಅವಿನಾಶ್ ಸಿಂದೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಮೊದಲಿಗೆ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ನಂತರ ಮೇಯರ್ ವರ್ಷಾ ಜಾನಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಕರ್ನಾಟಕ ರಾಜೋತ್ಸವದ ಶುಭಕೋರಿದರು