ಕಲಬುರಗಿ…. ಸ್ಲಗ್:ಸಡಗರ ಸಂಭ್ರಮದಿಂದ ಕಲ್ಬುರ್ಗಿಯಲ್ಲಿಯೂ ಕೂಡ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ… ಅಂಕರ್: ನಾಡಿನಾದ್ಯಂತ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಕಲ್ಬುರ್ಗಿಯಲ್ಲಿಯೂ ಕೂಡ ಸಡಗರ ಸಂಭ್ರಮದಿಂದ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು… ನಗರದ ನಗರೇಶ್ವರ ಶಾಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದಂತ ಪ್ರಿಯಾಂಕ ಖರ್ಗೆ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣಕ್ಕು ಮುನ್ನ ಸಚಿವ ಪ್ರಿಯಾಂಕ ಖರ್ಗೆ ಸೇರಿದಂತೆ ಶಾಸಕರಾದಂತಹ ಅಲ್ಲಮಪ್ರಭು ಪಾಟೀಲ್, ತಿಪ್ಪಣಪ್ಪ ಕಮಕ್ನೂರ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೇರಿದಂತೆ ಇನ್ನಿತರರು ಕನ್ನಡಾಂಬೆ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದಂತ ಪ್ರಿಯಾಂಕ ಖರ್ಗೆ ಅವರು ನಾಡಿನ ಜನತೆಗೆ ಜನತೆಗೆ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಶುಭ ಕೋರಿ, ಸರ್ಕಾರದ ವತಿಯಿಂದ ನವ ಕಲಬುರ್ಗಿ ನಿರ್ಮಾಣದ ನೀಲಿ ನಕ್ಷೆ ರೆಡಿಯಾಗಿದ್ದು, ಶೀಘ್ರದಲ್ಲಿಯೇ ಈ ಕಾರ್ಯ ಪ್ರಾರಂಭವಾಗಲಿದೆ ಎನ್ನುವ ಭರವಸೆ ನೀಡಿದರು… ಬಳಿಕ ಐದು ಜನ ಫಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಲಾಯಿತು… ಕಾರ್ಯಕ್ರಮದ ನಂತರ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಕೃಷಿ ಇಲಾಖೆ’ ಗೃಹಲಕ್ಷ್ಮಿ ಇಲಾಖೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಸೇರಿದಂತೆ ಹಲವು ಇಲಾಖೆಯ ಸ್ಥಬ್ಧ ಚಿತ್ರಗಳನ್ನು ಪ್ರದರ್ಶಿಸಲಾಯಿತು
ಸಡಗರ ಸಂಭ್ರಮದಿಂದ ಕಲ್ಬುರ್ಗಿಯಲ್ಲಿಯೂ ಕೂಡ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ
ಸಡಗರ ಸಂಭ್ರಮದಿಂದ ಕಲ್ಬುರ್ಗಿಯಲ್ಲಿಯೂ ಕೂಡ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ





