ಗುತ್ತೆದಾರ್ ಪರ ಬ್ಯಾಟ್ ಬಿಸಿದ ಸ್ವಾಮೀಜಿ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ, ಎಸ್ಐಟಿ ಮೂಲಕ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮತ್ತು ಅವರ ಮಕ್ಕಳ ಮನೆ ಮೇಲೆ ದಾಳಿ ಮಾಡಿ ಅವರ ರಾಜಕೀಯ ಭವಿಷ್ಯವನ್ನು ಮುಗಿಸಲು ಷಡ್ಯಂತ್ರ ಹೂಡಲಾಗುತ್ತಿದೆ ಎಂದು ಚಿತ್ತಾಪುರ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ. ಆಳಂದ ಮತಕ್ಷೇತ್ರದ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರು ರಾಜಕೀಯವಾಗಿ ಮುಗಿದುಹೋಗುವಂತೆ ಕುತಂತ್ರ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ