ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಯಾದಗಿರಿ ನಗರದ ಹೊರಭಾಗದಲ್ಲಿರುವ ಪೊಲೀಸ್ ಹುತಾತ್ಮರ ಪರೇಡ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಣೆ ಮಾಡಲಾಯಿತು.ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಣೆ ಮಾಡಲಾಯಿತು. ಈ ವೇಳೆ ಕವಾಯತು ಕಮಾಂಡರ ಅವರಿಂದ ಗೌರವ ವಂದನೆ ಸಲ್ಲಿಸಲಾಯಿತು.ಕಲಬುರಗಿ ವಲಯದ ಡಿಐಜಿ ಶಾಂತನು ಸಿನ್ಹಾ,ಜಿಲ್ಲಾಧಿಕಾರಿ ಹರ್ಷಲ್ ಭೋಯರ್,ಜಿಪಂ ಸಿಇಓ ಲವೀಶ್ ಒರಡಿಯಾ,ಎಸ್ಪಿ ಪೃಥ್ವಿಕ್ ಶಂಕರ್ ಸೇರಿ ಹಲವು ಗಣ್ಯರು ಹುತಾತ್ಮ ಸ್ಮಾರಕಕ್ಕೆ ಪುಷ್ಪ ಅರ್ಪಿಸಲಾಯಿತು.ಈ ವೇಳೆ ಡಿಐಜಿ ಶಾಂತನು ಸಿನ್ಹಾ ಅವರು ಮಾತನಾಡಿ,ಕರ್ತವ್ಯದಲ್ಲಿ ಹುತಾತ್ಮರಾದ ಯೋಧರ ಹಾಗೂ ಪೊಲೀಸರ ಕಾರ್ಯವನ್ನು ಸ್ಮರಣೆ ಮಾಡಿದರು.ಪೊಲೀಸರು ಆರೋಗ್ಯ ಕಾಪಾಡಿಕೊಂಡು ಉತ್ತಮ ರೀತಿ ಸೇವೆ ಸಲ್ಲಿಸಬೇಕಿದೆ ಎಂದರು