Home Uncategorized ಬ್ರೇಕ್ಫೇಲಾಗಿ ಬಿಎಂಟಿಸಿ ಬಸ್ವೊಂದು ನಂದಿನಿ ಪಾರ್ಲರ್ಗೆ ನುಗ್ಗಿದ ಘಟನೆಶಂಕರ್ ನಾಗ್ ಬಸ್ ನಿಲ್ದಾಣದ ಬಳಿ ನಡೆದಿದೆ

ಬ್ರೇಕ್ಫೇಲಾಗಿ ಬಿಎಂಟಿಸಿ ಬಸ್ವೊಂದು ನಂದಿನಿ ಪಾರ್ಲರ್ಗೆ ನುಗ್ಗಿದ ಘಟನೆಶಂಕರ್ ನಾಗ್ ಬಸ್ ನಿಲ್ದಾಣದ ಬಳಿ ನಡೆದಿದೆ

0

ಬೆಂಗಳೂರು: ಬ್ರೇಕ್ಫೇಲಾಗಿ ಬಿಎಂಟಿಸಿ ಬಸ್ವೊಂದು ನಂದಿನಿ ಪಾರ್ಲರ್ಗೆ ನುಗ್ಗಿದ ಘಟನೆ ಕಮಲಾ ನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಬಳಿ ನಡೆದಿದೆಕಮಲಾ ನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಬಳಿ 96G ಸಂಖ್ಯೆಯ ಬಿಎಂಟಿಸಿ ಬಸ್ ಮುಂಜಾನೆ 7:30ಕ್ಕೆ ಈ ಮಾರ್ಗದಲ್ಲಿ ಹೊರಟಿತ್ತು. ಈ ವೇಳೆ ಬಸ್ನ ಬ್ರೇಕ್ ಫೇಲ್ಯೂರ್ ಆದ ಕಾರಣ, ಅದು ನಂದಿನಿ ಪಾರ್ಲರ್ ಐಸ್ಕ್ರೀಮ್ ಅಂಗಡಿಯೊಳಗೆ ನುಗ್ಗಿದೆ. ಅದೃಷ್ಟವಶಾತ್, ಅಂಗಡಿ ತೆರೆದಿರಲಿಲ್ಲ ಹೀಗಾಗಿ ಘಟನೆಯಲ್ಲಿ ಯಾವ ಸಾವು-ನೋವು ಸಂಭವಿಸಿಲ್ಲ. ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಆದರೆ, ಅಂಗಡಿಗೆ ಹಾನಿಯಾಗಿದೆ. ಬಿಎಂಟಿಸಿ ಅಧಿಕಾರಿಗಳು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ96G ಸಂಖ್ಯೆಯ ಬಿಎಂಟಿಸಿ ಬಸ್ ರೂಟ್ ನಂ. 500-ಎ ಆಗಿತ್ತು. ಇದು ಶಂಕರ್ ನಾಗ್ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್ ಕಡೆಗೆ ಹೊರಟಿತ್ತು. ಬಸ್ ನಿಲ್ದಾಣದಿಂದ ಸುಮಾರು 200 ಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ನುಗ್ಗಿದ ಪರಿಣಾಮ, ನಂದಿನಿ ಪಾರ್ಲರ್ ಅಂಗಡಿಯ ಗೋಡೆಗೆ ಹಾನಿಯಾಗಿದೆ. ಅಂಗಡಿಯ ಒಳಗಿದ್ದ ಕೆಲವು ಸ್ಟೂಲ್ ಹಾಳಾಗಿದೆ ಎಂಬುದು ಘಟನೆ ನಂತರ ನಡೆಸಿದ ಪರಿಶೀಲನೆಯಿಂದಾಗಿ ತಿಳಿದುಬಂದಿದೆಅಪಘಾತದ ಸಮಯದಲ್ಲಿ ಬಸ್ನಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಅವರಲ್ಲಿ ಹೆಚ್ಚಿನವರು ತಮ್ಮ ಕೆಲಸಕ್ಕೆ ಹೊರಟಿದ್ದರು. ಬಸ್ ನಿಲ್ದಾಣದ ಹತ್ತಿರವೇ ಅಪಘಾತ ಸಂಭವಿಸಿದ್ದರಿಂದ, ಪ್ರಯಾಣಿಕರು ಸುರಕ್ಷಿತವಾಗಿ ಬಸ್ನಿಂದ ಇಳಿದು ಬೇರೊಂದು ಬಸ್ನಲ್ಲಿ ಪ್ರಯಾಣಿಸಿದ್ದಾರೆ. ಆದರೆ, ಶಾಲಾ, ಕಾಲೇಜುಗೆ ತಡವಾದ ಹಿನ್ನೆಲೆ ಪ್ರಯಾಣಿಕರಿಗೆ ತೊಂದರೆ ಉಂಟಾಯಿತುಈ ಬಗ್ಗೆ ಬಸ್ ಚಾಲಕ ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಬಸ್ ನಿಲ್ದಾಣದಿಂದ ಹೊರಾಟಾಗ ಫೇಲ್ ಆಗಿ, ನಿಯಂತ್ರಣ ತಪ್ಪಿತ್ತು. ಬಸ್ ನಿಲ್ದಾಣದಿಂದ ಹೊರಡಲು ತೊಡಗಿದ್ದೆ. ರಸ್ತೆಯಲ್ಲಿ ಸ್ವಲ್ಪ ಟ್ರಾಫಿಕ್ ಇದ್ದರಿಂದ ಬೇಗ ಬೇಗ ಹ್ಯಾಂಡ್ ಬ್ರೇಕ್ ಹಾಕಿದೆ, ಆದರೆ ಮುಖ್ಯ ಬ್ರೇಕ್ ಕೆಲಸ ಮಾಡಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರು ಆಗದ ಕಾರಣ ನಂದಿನಿ ಪಾರ್ಲರ್ಗೆ ನುಗ್ಗಿದೆ ಎಂದು ಹೇಳಿದರುಅಪಘಾತದಿಂದಾಗಿ ಸ್ಥಳೀಯ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಯಿತು. ಸ್ಥಳದಲ್ಲಿ ಟ್ರಾಫಿಕ್ ನಿರ್ಮಾಣವಾಯಿತು. ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬಂದು ಸಂಚಾರ ನಿರ್ವಹಣೆ ತಹಬದಿಗೆ ತಂದರು. ಶಂಕರ್ ನಾಗ್ ಪೊಲೀಸ್ ಸ್ಟೇಷನ್ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here

error: Content is protected !!