Home Uncategorized 22 ರಿಂದ ಪ್ರಾರಂಭವಾಗುವ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಸಮಾಜದ ಬಂಧುಗಳು ಯ್ಯಾವ ಜಾತಿ ಬರೆಸಬೇಕು ಚರ್ಚೆ

22 ರಿಂದ ಪ್ರಾರಂಭವಾಗುವ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಸಮಾಜದ ಬಂಧುಗಳು ಯ್ಯಾವ ಜಾತಿ ಬರೆಸಬೇಕು ಚರ್ಚೆ

0
22 ರಿಂದ ಪ್ರಾರಂಭವಾಗುವ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಸಮಾಜದ ಬಂಧುಗಳು ಯ್ಯಾವ ಜಾತಿ ಬರೆಸಬೇಕು  ಚರ್ಚೆ

ಕರ್ನಾಟಕ ಸರ್ಕಾರದಿಂದ ರಾಜ್ಯದಲ್ಲಿ 2025ರ ಸೆಪ್ಟೆಂಬರ್-22 ರಿಂದ ಪ್ರಾರಂಭವಾಗುವ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಸಮಾಜದ ಬಂಧುಗಳು ಯ್ಯಾವ ಜಾತಿ ಬರೆಸಬೇಕು ಎಂದು ಸಮಾಜದ ಮುಖಂಡರುಗಳು ಚರ್ಚೆ ಮಾಡಿ ಒಂದು ನಿರ್ಣಯ ಮಾಡಲಾಗಿದ್ದು ಅದರಂತೆ ಎಲ್ಲರು ಬರೆಸಬೇಕು ಎಂದು ಜಿಲ್ಲಾ ಕೋಲಿ-ಕಬ್ಬಲಿಗ ಸಮುದಾಯಗಳ ಸಮನ್ವಯ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕೋಲೀ ಕಬ್ಬಲಿಗ ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಆದ್ದರಿಂದ ಮುಂಬರುವ ಸಮೀಕ್ಷೆಯಲ್ಲಿ ನಮ್ಮ ಎಲ್ಲಾ ವಾಸ್ತವ ಸ್ಥಿತಿಗತಿಗಳು, ಅಂಕಿಅಂಶಗಳ ಮತ್ತು ನಿಖರವಾದ ಮಾಹಿತಿ ಇದ್ದಾಗ ಮಾತ್ರ ಸರ್ಕಾರಕ್ಕೆ ಸವಲತ್ತುಗಳು ಮತ್ತು ಮೀಸಲಾತಿ ನೀಡಲು ಅನುಕೂಲವಾಗುತ್ತದೆ. ಹೀಗಾಗಿ ಕರ್ನಾಟಕ ಮತ್ತು ಕನ್ನಡದಲ್ಲಿ ಬಳಸುವುದರಿಂದ ಮತ್ತು ಬುಡಕಟ್ಟು ಲಕ್ಷಣ ಹೊಂದಿರುವುದರಿಂದ ಮೂಲ ದಾಖಲೆಯಂತೆ ಕಬ್ಬಲಿಗ ಪದವನ್ನು ಮೂಲ ಜಾತಿಯ ಕಾಲಂದಲ್ಲಿ ಸಂಕೇತ ಸಂಖ್ಯೆ:4-0588 ನಮೂದಿಸಬೇಕು.ಅದರಂತೆ ಹಿಂದಿಯಲ್ಲಿ ನಮ್ಮ ಜಾತಿಯನ್ನು ಕೋಲಿ ಎಂದು ಕರೆಯುವುದರಿಂದ ಸಮೀಕ್ಷೆ ಉಪಜಾತಿ ಕಾಲಂ 10 ರಲ್ಲಿ ಸಂಕೇತ ಸಂಖ್ಯೆ: 4-0712 ಎಂದು ನಮೂದಿಸಬೇಕು. ಅದರಂತೆ ಇದೇ ಜಾತಿಯನ್ನು ಮರಾಠಿ ಭಾಷೆಯಲ್ಲಿ ಟೋಕರೆ ಕೋಲಿ ಎಂದು ಕರೆಯುವುದರಿಂದ ಸಮೀಕ್ಷೆಯಲ್ಲಿ ಪರ್ಯಾಯ ಪದದ ಕಾಲಂ 11 ರಲ್ಲಿ ಸಂಕೇತ ಸಂಖ್ಯೆ: C-22.2 ಎಂದು ನಮೂದಿಸಬೇಕೆಂದು ಜಿಲ್ಲೆಯ ಎಲ್ಲಾ ಸಮಾಜದ ಬುದ್ದಿಜೀವಿಗಳು, ಮುಖಂಡರು, ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳು ಸಭೆ ಸೇರಿ ಸಮಾಜದ ಮುಂದಿನ ಭವಿಷ್ಯಕ್ಕಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಸಮಾಜದ ಮುಖಂಡರು ಆಯಾ ತಾಲೂಕುಗಳಲ್ಲಿ ಜಾಗೃತಿಯನ್ನು ಮೂಡಿಸಬೇಕು, ಮತ್ತು ಸಮಾಜದ ಬಂಧುಗಳು ಎಲ್ಲರೂ ಒಂದೇ ರೀತಿಯಾದ ಮಾದರಿಯನ್ನು ಅನುಸರಿಸಿ ಸಮೀಕ್ಷೆಗೆ ಬಂದ ಅಧಿಕಾರಿಗಳ ಜೊತೆ ಸಹಕರಿಸಬೇಕೆಂದು ಪತ್ರಿಕಾ ಗೋಷ್ಠಿಯಲ್ಲಿ ಕೋರಲಾಗಿದೆ

LEAVE A REPLY

Please enter your comment!
Please enter your name here

error: Content is protected !!