ಅಗಸ್ಟ್ 15ರಂದು ಇಡೀ ದೇಶದಲ್ಲಿ 79ನೇ ಸ್ವಾತಂತ್ರ ದಿನಾಚರಣೆಯು ಬಹು ವಿಜೃಂಬಣೆಯಿಂದ ಆಚರಿಸಲಾಯಿತು. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಕೂಡ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ ಸ್ವತಂತ್ರ ದಿನಾಚರಣೆ ಹಬ್ಬದ ರೀತಿಯಲ್ಲಿ ಸರ್ಕಾರದ ನಿರ್ದೇಶನದಂತೆ ಆಚರಿಸಲಾಗಿದೆ.ಆದರೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ (ಹಳೆ) ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅದೇ ತಾಲೂಕಿನ ಬಡದಾಳ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ಎರಡು ಶಾಲೆಗಳಲ್ಲಿ 79ನೇ ಸ್ವಾತಂತ್ರ ದಿನಾಚರಣೆಯ ಸಂಧರ್ಭದಲ್ಲಿ ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರ ಇಡದೇ ಅಪಮಾನ ಮಾಡಿರುತ್ತಾರೆ. ಸ್ವಾತಂತ್ರ ದಿನಾಚರಣೆ ಸಂಧರ್ಭದಲ್ಲಿ ಕಡ್ಡಾಯವಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರವಿಟ್ಟು ಆಚರಿಸಬೇಕು ಎಂದು ಸರ್ಕಾರದ ಆದೇಶವಿದೆ ಮತ್ತು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಇವರೂ ಕೂಡ ಜ್ಞಾಪನ ಪತ್ರದಲ್ಲಿ ಶಿಷ್ಯಚಾರ ಉಲಂಘನೆಯಾದರೆ ನೇರ ಹೊಣೆ ಆ ಶಾಲೆಯ ಮುಖ್ಯಸ್ಥರು ಹೊಣೆಗಾರರೆಂದು ನಿಖರವಾಗಿ ತಿಳಿಸಿದ್ದಾರೆ.ಈ ಘಟನೆ ನಡೆದು 20 ದಿನಾ ಕಳೆದರೂ ಕೂಡ ಅವರ ಮೇಲೆ ಯಾವುದೇ ಶಿಸ್ತು ಕ್ರಮ ಆಗಿರುವುದಿಲ್ಲ.ಕೂಡಲೆ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ
ಆಗಸ್ಟ್-15 ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ| ಬಿ.ಆರ್. ಅಂಬೇಡ್ಕರ ಫೋಟೋ ಇಡದೆ ಅಗೌರವ
2. ಅಫಜಲಪೂರ ತಾಲೂಕಿನ ಸೊನ್ನ ಹಳೆ ಗ್ರಾಮ ಮತ್ತು ಬಡದಾಳ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳ ಆಗಸ್ಟ್-15 ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ| ಬಿ.ಆರ್. ಅಂಬೇಡ್ಕರ ಫೋಟೋ ಇಡದೆ ಅಗೌರವ ತೋರಿರುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕರ್ನಾಟಕ ಒತ್ತಾಯಿಸಿದೆ





