ಅಥಣಿ ತಾಲೂಕಿನ ಸುಕ್ಷೇತ್ರ
ಹಲ್ಯಾಳ ಗ್ರಾಮದ ಶಿವರಾಯ ಮುತ್ಯಾ ಜಾತ್ರೆಯು ಅತೀ ವಿಜೃಂಭಣೆಯಿಂದ ಜಾರಿಗಿತ್ತು
ಜಾತ್ರೆ ದಿನವಾದ ಇದು ಶಿವರಾಯ ಮುತ್ಯಾ ದೇವಸ್ಥಾನದ ಪೂಜಾರಿಯಾದ ಸೋಮಪ್ಪ ಮಗದುಮ್ ಅವರು ಮುಂಜಾನೆ ಕೃಷ್ಣ ನದಿಯಿಂದ ಮಡಿ ಜಲವನ್ನು ತಂದು ಶಿವರಾಯ ಮುತ್ಯಾ ಮೂರ್ತಿಗೆ ವಿಶೇಷ ಪೂಜೆ ಮಹಾಭಿಷೇಕವನ್ನು ನೆರವೇರಿಸಿದರು
ತದನಂತರ ಶಿವರಾಯ ಮುತ್ಯಾ ಮೂರ್ತಿಯನ್ನು ಪಾಲಿಕೆಯಲ್ಲಿ ಕೂರಿಸಿ ಗ್ರಾಮದ ತುಂಬಿಲ್ಲ ಮೆರವಣಿಗೆ ಮಾಡಲಾಯಿತು ಗ್ರಾಮದ ನಟ್ಟ ನಡುವೆ ಅಲಗ ಹಾಯುವ ಕಾರ್ಯಕ್ರಮ ಜರುಗಿತು
ಇದೇ ವೇಳೆ ವಿವಿಧ ವಾದ್ಯಮಿಳದವರು ಡೊಳ್ಳು ಕುಣಿತದವರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಜಾತ್ರೆಗೆ ಇನ್ನಷ್ಟು ಮೆರವ ನೀಡಿದರು
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು ಶಿವರಾಮ ಮುತ್ಯ ಅವರ ಪ್ರಸಾದವನ್ನು ಸೇವಿಸಿ ಶಿವರಾಯ ಮುತ್ಯಾ ಆಶೀರ್ವಾದಕ್ಕೆ ಪಾತ್ರರಾದರು