Google search engine
ಮನೆUncategorized12 ವರ್ಷದ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ ಯುವಕ

12 ವರ್ಷದ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ ಯುವಕ

ದಲಿತ ಮಾದಿಗ ಜನಾಂಗದ 12 ವರ್ಷದ ರೇಣುಕಾ ತಂದೆ ಸಂಗಪ್ಪ‌ ಎಂಬ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ ಕುರುಬ ಜನಾಂಗದ ಯುವಕನಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ ಬಾಲಕಿಗೆ ಹುಟ್ಟುವ ಮಗುವಿಗೆ ಪಾಲನೆ, ಪೋಷಣೆ ಮಾಡಲು 10 ಎಕರೆ ಭೂಮಿ‌ ಮತ್ತು 50 ಲಕ್ಷ್ಯ ರೂಪಾಯಿ ಮಂಜೂರು ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಲಿಬೆಂಚಿ ಗ್ರಾಮದ 12 ವರ್ಷದ ದಲಿತ ಮಾದಿಗ ಯುವತಿಯಾದ ರೇಣುಕಾ ತಂದೆ ಸಂಗಪ್ಪ ಮಾದರ ಇವರಿಗೆ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ ಕುರುಬ ಜನಾಂಗದ ಯುವಕನಾದ ಚಂದ್ರಶೇಖರ ತಂದೆ ಹಣಮಂತ್ರಾಯ ಬಿರಾದಾರ ಈತನನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಈ ಯುವತಿಯ ಪಾಲಕರಿಗೆ ಹತ್ತು ಎಕರೆ ಭೂಮಿ ಮತ್ತು ಹುಟ್ಟುವ ಮಗುವಿಗೆ ಪಾಲನೆ ಮತ್ತು ಪೋಷಣೆ ಮಾಡಲು 50 ಲಕ್ಷ್ಯ ರೂಪಾಯಿ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ವತಿಯಿಂದ ಯಾದಗಿರಿ ಜಿಲ್ಲಾಧಿಕಾರಿಗಳು, ಯಾದಗಿರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಮಾನ್ಯ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ಸೇರಿದಂತೆ ಮಾನ್ಯ ಆರಕ್ಷಕ ಉಪಾಧೀಕ್ಷಕರು ಯಾದಗಿರಿ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕಾರ್ಜುನ ಕುರಕುಂದಿ, ಅಜೀಜ್ ಸಾಬ್ ಐಕೂರ್ ಸೇರಿದಂತೆ ಹಲವರು ಇದ್ದರು

 

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!