. ಶ್ರಾವಣ ಮಾಸದ ಮುಕ್ತಾಯದ ಪ್ರಯುಕ್ತ ಗಣಜಲಖೇಡ ಗ್ರಾಮದಲ್ಲಿ ಲಿಂಗೈಕ್ಯ ಮಾಣಿಕ ಶಿವಯೋಗಿಗಳ ಆಶೀರ್ವಾದದೊಂದಿಗೆ ಪರಮ ಪೂಜ್ಯ ನಾಗೇಶ ಮುತ್ಯಾರವರ ನೇತೃತ್ವದಲ್ಲಿ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಜೊಡ ಪಲ್ಲಕ್ಕಿ ಉತ್ಸವ ಜರುಗಿತು
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸ ಮುಕ್ತಾಯ ಸಮಾರಂಭದ ನಿಮಿತ್ಯವಾಗಿ ಕಲಬುರಗಿ ತಾಲೂಕಿನ ಗಣಜಲಖೇಡ ಗ್ರಾಮದಲ್ಲಿ ಮೌನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ, ಜಗದ್ಗುರು ಮೌನೇಶ್ವರರ ಭಾವಚಿತ್ರ ಮೆರವಣಿಗೆ, ಹಾಗೂ ಮೌನೇಶ್ವರರ ಮತ್ತು ಕಾಳಿದೇವಿಯ ಜೋಡ ಪಲ್ಲಕ್ಕಿ ಉತ್ಸವವು
ನಂದಿಕೋಲ ಮತ್ತು ಪುರವಂತರ ಸೇವೆ, ಬಾಜಾ ಬಜಂತ್ರಿ, ಡೊಳ್ಳು-ವಾದ್ಯ ಮೇಳದೊಂದಿಗೆ ಬಲು ವಿಜೃಂಭಣೆಯಿಂದ ಗ್ರಾಮದ ಮುಖ್ಯ ಬೀದಿಗಳಿಂದ ಮೆರವಣಿಗೆ ಮೂಲಕ ಹಾಯ್ದು ಜಗದ್ಗುರು ಮೌನೇಶ್ವರ ದೇವಸ್ಥಾನ ತಲುಪಿತು. ಈ ಸಂದರ್ಭದಲ್ಲಿ ಮೌನೇಶ್ವರರ ನೂರಾರು ಭಕ್ತರು, ಗ್ರಾಮಸ್ಥರು ಸೇರಿದಂತೆ ಗ್ರಾಮದ ಮುಖಂಡರಾದ ಶರಣಬಸ್ಸಪ್ಪಾ ತೊನಸಳ್ಳಿ, ಶಿವಕುಮಾರ ಚನ್ನೂರ, ಶರಣು ದೇಗಾಂವ್, ಧನಶೆಟ್ಟಿ ಗಿರೆಪ್ಪಗೋಳ್, ಕಲ್ಯಾಣರಾವ್ ಪಾಟೀಲ್, ಅನೀಲ್ ಪೂಜಾರಿ, ಮನೋಹರ್ ಪಂಚಾಳ್,ಓಂಪ್ರಕಾಶ್ ನರಿಬೋಳ್ ಭಾಗವಹಿಸಿದ್ದರು