ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾನೂನು ಬಾಹಿರ ಒತ್ತುವರಿ ಮತ್ತು ಕಟ್ಟಡಕ್ಕೆ ಅಮವಾಸಿಯಂದೇ ಡೆಮಾಲಿಷನ್ ಭಾಗ್ಯ ನೀಡಿದ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ್ .
ಕಲ್ಬುರ್ಗಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಇರುವ ವಾರ್ಡ್ ನಂ 44 ರ ಶಾಂತಿನಗರ, ಹೋಟೆಲ್ ಕಮಲ್ ಹಿಂದಿನ ರಸ್ತೆಯಲ್ಲಿ ಒತ್ತುವರಿ ಮಾಡಿದ ಸ್ಥಳವನ್ನು ಇಂದು ಮುಕ್ತಿ ನೀಡಿ ಸುಗಮ ವಾಹನ ಸಂಚಾರ ಮತ್ತು ಸ್ವಚ್ಛತೆ ಮೊದಲನೇ ಆದ್ಯತೆ ಎಂದರು.
ಮುಂದಿನ ಹಂತದಲ್ಲಿ ವಾಹನ ಸಂಚಾರ ಹಾಗು ಸ್ವಚ್ಛತೆಗೆ ಅಡ್ಡವಾಗಿ ನಿರ್ಮಿಸಿರು ಎಲ್ಲ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಒಡೆಯಲಾಗುವದು ಎಂದು ಹೇಳಿದರು
ವಲಯ ಆಯುಕ್ತ ಉಮೇಶ ಚವಾಣ್, ಪರಿಸರ ಇಂಜಿನಿಯರ್ ಬಾಬುರಾವ್ ಮೇಲ್ಕೆರಿ, ಇಂಜಿನಿಯರ ರವಿ ಚವಾಣ್, ರಾಘವೇಂದ್ರ, ದೀಪಕ್ , ನವಾಜ್, ಪೊಲೀಸ್ ಹಾಗು ಜೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು