Google search engine
ಮನೆಕೃಷಿಡೀಮ್ಡ್ ಅರಣ್ಯ ಪ್ರದೇಶ ಸರ್ವೇಗೆ ಡಿ.ಸಿ. ಸೂಚನೆ

ಡೀಮ್ಡ್ ಅರಣ್ಯ ಪ್ರದೇಶ ಸರ್ವೇಗೆ ಡಿ.ಸಿ. ಸೂಚನೆ

ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಡೀಮ್ಡ್ ಅರಣ್ಯ ಪ್ರದೇಶವನ್ನು ಕಂದಾಯ, ಅರಣ್ಯ, ಭೂದಾಖಲೆಗಳ ಇಲಾಖೆಯು ಜಂಟಿಯಾಗಿ ಸರ್ವೇ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದರು.

ಈ ಸಂಬಂಧ ತಮ್ಮ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರರು, ಡಿ.ಡಿ.ಎ.ಆರ್., ಎ.ಡಿ.ಎಲ್.ಆರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು 3-4 ತಿಂಗಳ ಒಳಗಾಗಿ ವಾಸ್ತವ ವರದಿ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶ ಘೋಷಣೆಗೆ ಪೂರಕವಾಗಿ ಕರ್ನಾಟಕ ಅರಣ್ಯ ಕಾಯ್ದೆ-1963 ಸೆಕ್ಷನ್ 4ರ ಪ್ರಕಾರ ಜಿಲ್ಲೆಯಲ್ಲಿ 25 ಅರಣ್ಯ ಪ್ರದೇಶಗಳನ್ನು ಅಧಿಸೂಚಿಸಿದ್ದು, ಇದರಲ್ಲಿ ಪ್ರಗತಿಯಲ್ಲಿರುವ 8 ಪ್ರದೇಶಗಳ ಕುರಿತು ಕೂಡಲೆ ಕಂದಾಯ ಉಪ ವಿಭಾಗದ ಸಹಾಯಕ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದಲ್ಲಿ ಸೆಕ್ಷನ್-17ರಂತೆ ಕಾಯ್ದಿಟ್ಟ ಅರಣ್ಯ ಪ್ರದೇಶ ಘೋಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಇನ್ನು ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಸಂರಕ್ಷಣೆ ನಿಟ್ಟಿನಲ್ಲಿ ಕೆಲವು ಗ್ರಾಮಗಳಲ್ಲಿ ಪಹಣಿ, ಮೊಟೇಷನ್‌ನಲ್ಲಿ ಮಾಲೀಕತ್ವದ ಬಗ್ಗೆ ತಕರಾರು ಇದ್ದು, ಇದನ್ನು ತಹಶೀಲ್ದಾರರು, ಆರ್.ಎಫ್.ಓ.ಗಳು ಸರಿಪಡಿಸಬೇಕೆಂದು ಡಿ.ಸಿ. ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಪ್ರಭುರೆಡ್ಡಿ, ತಾಲೂಕಿನ ತಹಶೀಲ್ದಾರರು,. ಎ.ಡಿ.ಎಲ್.ಆರ್. ಭಾಗಿಯಾಗಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!