ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಮತ್ತು ಸ್ಥಳೀಯ ಶಾಸಕರೇ ಎಲ್ಲಾದ್ದೀರೀ? ಸರ್ಕಾರಿ ಶಾಲೆ ಅಂದ್ರೆ ಯಾಕೆ ಇಷ್ಟೊಂದು ನಿರ್ಲಕ್ಷ್ಯ ನಿಮಗೆ? ಇಲ್ಲಿಯ ಮಕ್ಕಳು ಭಯದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ, ಸರ್ಕಾರಿ ಶಾಲೆ ಅಂದ್ರೆ ಬೇಡವಾಗೋಯ್ತಾ? ಈ ಎಲ್ಲಾ ಮಾತುಗಳು ಕೇಳಿ ಬರ್ತಿರೋದು ಅಫಜಲಪುರ ತಾಲೂಕಿನ ಜೇವರ್ಗಿ (ಬಿ) ಗ್ರಾಮಸ್ಥರಿಂದ. ಏನಿದು ವಿಷ್ಯ ಅಂತೀರಾ ನೋಡ್ಕೊಂಡ್ ಬರೋಣ ಬನ್ನಿ…
ಹೌದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಜೇವರ್ಗಿ (ಬಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಥೆಯಿದು, ಈ ಶಾಲೆಯಲ್ಲಿ ಒಟ್ಟು ಆರು ಕೋಣೆಗಳಿದ್ದು ಅದರಲ್ಲಿ ಅರ್ಧ ಭಾಗವನ್ನು ಈಗಾಗಲೇ ನೆಲಸಮವಾಗಿದೆ. ಇನ್ನೂ ಉಳಿದ ಎಲ್ಲಾ ಕೋಣೆಗಳ ಮೇಲ್ಛಾವಣಿಯು ಸಂಪೂರ್ಣವಾಗಿ ಬೀಳುವ ಹಂತದಲ್ಲಿದೆ. ಈ ಶಾಲೆಯಲ್ಲಿ 1 ನೇ ತರಗತಿಯಿಂದ 7 ನೇ ತರಗತಿಯವರೆಗೂ ಒಟ್ಟು 182 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದೂ, ಪ್ರಿನ್ಸಿಪಲ್ ಸೇರಿ ಒಟ್ಟು ಆರು ಜನ ಶಿಕ್ಷಕರು ಈ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೂ ಸೇರಿ ಶಿಕ್ಷಕರಿಗೂ ಭಯದ ವಾತಾವರಣ ಎದುರಾಗಿದ್ದೂ, ಆದರೆ ಇದರ ಬಗ್ಗೆ ಸಂಬಂಧಪಟ್ಟವರಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಈ ಶಾಲೆಯನ್ನು ಹೊಸದಾಗಿ ನಿರ್ಮಿಸಬೇಕು ಹಾಗೂ ಶಾಲೆಯ ಸುತ್ತಮುತ್ತ ಕಾಂಪೌಂಡ್ ನಿರ್ಮಿಸುವಂತೆ ಎಸ್.ಡಿ. ಎಮ್.ಸಿ ಅಧ್ಯಕ್ಷರು, ಸದಸ್ಯರು ಮತ್ತು ಶಿಕ್ಷಕರ ಬೇಡಿಕೆಯಾಗಿದೆ, ಇನ್ನೂ ಆದಷ್ಟು ಬೇಗ ಈ ಶಾಲೆಯ ಬಗ್ಗೆ ಎಚ್ಚರಿಕೆ ವಹಿಸಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಿಕ್ಷಣಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರಾದ ಎಮ್. ವೈ. ಪಾಟೀಲ್ ಅವರು ಮುನ್ನೆಚ್ಚರಿಕೆ ವಹಿಸಬೇಕಾಗಿದೆ





