ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ರಾಜ್ಯಾತಿಥ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ನಗರದಲ್ಲಿ ಕೆಕೆಆರ್’ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರು ಪ್ರತಿಕ್ರಿಯಿಸಿದ್ದೂ ಈ ಕುರಿತು ಒಂದು ವರದಿ ಇಲ್ಲಿದೆ.
ಕಲಬುರಗಿ ನಗರದಲ್ಲಿ ಮಾತನಾಡಿದ ಕೆಕೆಆರ್’ಡಿಬಿ ಅಧ್ಯಕ್ಷ ಡಾ. ಅಜಯ್ ಅವರುಈಗಾಗಲೇ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಸಿಎಂ ಹಾಗೂ ಗೃಹಸಚಿವರಿಗೆ ಗೊತ್ತಾದ ತಕ್ಷಣ ಕ್ರಮ ಕೈಗೊಂಡಿದ್ದಾರೆ, ಈಗಾಗಲೇ ಅಮಾನತು ಮಾಡಿದ್ದಾರೆ, ಬೇರೆ ಕಡೆ ಸ್ಥಳಾಂತರಕ್ಕೆ ಸಿದ್ದತೆ ನಡೆದಿದ್ದೂ, ಬಿಜೆಪಿಯವರಿಗೆ ಬೇರೆ ವಿಚಾರ ಇಲ್ಲಾ ಸರ್ಕಾರದ ಬಗ್ಗೆ ಮಾತನಾಡೊದಕ್ಕೆ, ಮುಡಾ ಪ್ರಕರಣದಲ್ಲೂ ಬಿಜೆಪಿಯವರಿಗೆ ಏನು ಸಿಕ್ಕಿಲ್ಲಾ ಹಾಗಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದ ಅವರು ಮುಡಾ ಪ್ರಕರಣದಲ್ಲಿ ಸಿಎಂ ರಾಜಿನಾಮೆ ಗೆ ಬಿಜೆಪಿ ಪಟ್ಟು ಹಿಡಿದ ಹಿನ್ನಲೆ ಸಿಎಂ ಪರ ಬ್ಯಾಟ್ ಬೀಸಿ ಸಿಎಂ ತಪ್ಪೆಮಾಡಿಲ್ಲಾ ಅಂದ್ರೆ ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ. ಬಿಜೆಪಿಯವರು ವಿಜಯೇಂದ್ರ ಅವರು ಎಲ್ಲಾರೂ ಹತಾಷರಾಗಿದ್ದಾರೆ. ನಾಡಿದ್ದು ಕೋರ್ಟ್ ನಲ್ಲಿ ಹಿಯರಿಂಗ್ ಇದೆ. ಎಲ್ಲಾರು ಆತುರರಾಗಿ ಕಾಯುತ್ತಿದ್ದೆವೆ.
ತಪ್ಪೆ ಆಗಿಲ್ಲಾ ಎಂದು ಎಲ್ಲರು ವಾದ ಮಾಡಿದ್ದಾರೆ ಸ್ಪಷ್ಟವಾಗಿದೆ. ಜನಾಂದೊಲ ಕಾರ್ಯಕ್ರಮದಲ್ಲಿ ಜನ ಹೇಗೆ ತುಂಬಿತ್ತು. ಬಿಜೆಪಿಯವರ ಪಾದಯಾತ್ರೆಗೆ ಎಷ್ಟು ಜನ ಇತ್ತು..? ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಸ್ವ ಇಚ್ಚೆಯಿಂದ ಸೇರಿದ್ದರು. ಸಿಎಂ ಅವರ 40 ವರ್ಷದ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಸಹ ಇಲ್ಲಾ. ಬಿಜೆಪಿ ಯವರು ಎಂದೂ ರಾಜ್ಯದಲ್ಲಿ ಸರಿಯಾಗಿ ಆಶಿರ್ವಾದ ಮಾಡಿಲ್ಲಾ. ಅವರದು ಏನಿದ್ದರು ಬರೀ ಬ್ಯಾಕ್ ಡೋರ್ ನಿಂದ ಎಂಟ್ರಿ. ಹಿಂದೆಯೂ 110 ಸಿಟ್ ಗೆದ್ದಿದ್ದರು, ಮತ್ತೆ ಬ್ಯಾಕ್ ಡೋರ್ ಎಂಟ್ರಿ ಕೊಟ್ರೂ. ಕಳೆದ ಬಾರಿಯೂ ನಮ್ಮ ಶಾಸಕರನ್ನು ಕರೆದುಕೊಂಡು ಹೋಗಿ ಅಧಿಕಾರ ಪಡೆದರು. ರಾಜ್ಯದಲ್ಲಿ ಅವರಿಗೆ ಜನಾಶಿರ್ವಾದ ಇಲ್ಲಾ. ಇವತ್ತು ಕೇಂದ್ರದಲ್ಲೂ ಅವರಿಗೆ ಸ್ಪಷ್ಟ ಸರ್ಕಾರ ಇಲ್ಲಾ ಬೆರೆ ಬೆರೆ ಪಕ್ಷಗಳನ್ನು ಹಿಡಿದು ಅಧಿಕಾರ ಪಡೆದಿದ್ದಾರೆ. ಒಳ್ಳೆ ಸರ್ಕಾರ ನಡೆಯುವಲ್ಲಿ ಅವರಿಗೆ ಸಹಿಸಿಕೊಳ್ಳೊದಕ್ಕೆ ಆಗೊಲ್ಲಾ ಹಾಗಾಗಿ ಮೊದಿ ಹಾಗೂ ಅಮೀತ್ ಷಾ ಕುತಂತ್ರ ಮಾಡುತ್ತಿದ್ದಾರೆ. ಸಿಎಂ ರಾಜಿನಾಮೆ ಕೋಡುವ ಪ್ರಶ್ನೆಯೇ ಇಲ್ಲಾ. ನಮ್ಮ ಸರ್ಕಾರ ಗಟ್ಟಿಸರ್ಕಾರ ಇದೆ ಸಿಎಂ ಕಾರ್ಯಕ್ರಮದಲ್ಲಿ ಎಲ್ಲಾರೂ ಇದ್ವಿ. ಇಲ್ಲಾ ಅಂದ್ರೆ ಶಾಸಕರುಗಳು ಗೈರು ಆಗ್ತಿದ್ದರು, ಮುಂದಿನ ಐದು ವರ್ಷ ಅಲ್ಲಾ ಹತ್ತು ವರ್ಷ ನಮ್ಮದೆ ಸರ್ಕಾರ ಇರುತ್ತದೆ ಎಂಬ ಹೇಳಿಕೆ ಕೊಟ್ಟ ಅವರು ಸಿದ್ದಾರ್ಥ ಟ್ರಸ್ಟ್ ಗೆ ಜಮೀನು ನೀಡಿದ ವಿಚಾರವಾಗಿ ಮಾತನಾಡಿ ಈಗಾಗಲೇ ಎಂ.ಬಿ ಪಾಟೀಲ್ ಅವರು ಹಾಗೂ ಪ್ರೀಯಾಂಕ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಇದ್ದ ಜಾಗ ಸಿಎ ಸೈಟ್ ಇದೆ ಅದು, ಸಿಎ ಸೈಟ್ ನಲ್ಲಿ ಯಾವುದೇ ಹೂಡಿಕೆ ಮಾಡುವುದಕ್ಕೆ ಆಗಲ್ಲಾ. ಸಾರ್ವಜನಿಕರಿಗೆ ಅನೂಕುಲವಾಗುವ ಸ್ಕೂಲ್ ಅಥವಾ ಕಲ್ಯಾಣ ಮಂಟಪ ಬೇರೆ ಏನಾದ್ರು ಮಾಡಬಹುದು. ಅಲ್ಲಿ ಯಾವುದೇ ಹೂಡಿಕೆ ಹಾಗೂ ಬಿಸಿನೆಸ್ ಮಾಡುವ ಜಾಗ ಕೊಟ್ಟಿಲ್ಲಾ. ಅದಕ್ಕೆ ಎಷ್ಡು ದರ ಇದೆ ಅದೆಲ್ಲವು ಅವರು ಕಟ್ಟಿದ್ದಾರೆ ಎಂದ ಅವರು ಕಾಂಗ್ರೆಸ್ ಶಾಸಕರಿಗೆ 100ಕೋಟಿ ಆಫರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ನಮ್ಮ ಪಕ್ಷದ ಶಾಸಕರೇ ಹೇಳಿದ್ದಾರೆ ಅಂದ್ರೆ ಅರ್ಥ ಮಾಡಿಕೊಳ್ಳಿ. ಅವರಿಗೆ ಯಾರೋ ಪೋನ್ ಮಾಡಿ ಹೇಳಿದ್ದಾರೆ..! ಮಾತನಾಡಿ ಹೇಳ್ತಿನಿ ಅಂತಾ ಹೇಳಿದ್ದಾರೆ ಎಂದರು. ಇನ್ನೂ ಕೆಕೆಆರ್ ಡಿಬಿ ಅನುದಾನದಲ್ಲಿ ರಾಜ್ಯಪಾಲರಿಗೆ 5% ವಿಚಾರದ ವಿಷಯ ಮಾತನಾಡಿ ಹಿಂದಿನ ವರ್ಷದಲ್ಲಿ ಶೈಕ್ಷಣಿಕ ವರ್ಷ ಎಂದು ಘೋಷಣೆ ಮಾಡಿದ್ದೆವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದ ಪ್ರತಿಷ್ಠಿತ 25% ಹಣ ಪ್ರಾಥಮಿಕ ಶಾಲೆಗಳಿಗೆ ಪ್ರೌಢ ಶಾಲೆಗೆ ಬಳಿಸಿಕೊಳ್ಳಲು ಹೇಳಿದ್ದೆವೆ. ಕೆಲ ತಿಂಗಳ ಹಿಂದೆ ಎಲ್ಲಾ ಶಾಸಕರು ಭೇಟಿ ನೀಡಿ ಉನ್ನತ ಶಿಕ್ಷಣಕ್ಕೂ ಹಣ ಇಡಬೇಕು ಎಂದು ಹೇಳಿದ್ವಿ. ನಮ್ಮ ಭಾಗದ ವಿವಿ ಗಳಿಗೆ ಹಣ ಮಿಸಲಿಡಲು ಹೇಳಿದ್ದರು. ರಾಜ್ಯಪಾಲರಿಗೆ ಹಣ ಕೊಟ್ಟಿಲ್ಲಾ ಕೊಟ್ಟಿದ್ದು ಉನ್ನತ ಶಿಕ್ಷಣಕ್ಕೆ ಎಂದರು ಇನ್ನೂ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸರ್ಕಾರಿ ಶಾಲೆಗಳು ಅವನತಿ ಅಂಚಿಗೆ ಬಂದ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ನಮ್ಮಲ್ಲಿ 9249 ಶಾಲೆಗಳಲ್ಲಿ ಸಾಕಷ್ಟು ಶಾಲೆಗಳು ಹಾಳಾಗುತ್ತಿವೆ. ಬಹುತೇಕ 75% ಶಾಲೆಗಳು ದುರಸ್ಥಿಯಲ್ಲಿವೆ. ಪ್ರಾಮಾಣಿಕವಾಗಿ ಮಾದರಿ ಶಾಲೆಗಳು ಮಾಡುವ ಕೆಲಸ ಮಾಡುತ್ತಿದ್ದೆವೆ ಎಂದಿದ್ದಾರೆ





