ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡೂರು ಗ್ರಾಮ ಪಂಚಾಯತಿಯ ದುರ್ಗಾ ನಗರದಲ್ಲಿ ನಡೆದ ಯುವತಿಯ ಅತ್ಯಾಚಾರವನ್ನು ಖಂಡಿಸಿ ಜಿಲ್ಲಾ ಭೋವಿ ವಡ್ಡರ ಸಮಾಜದಿಂದ ಸುದ್ದಿಗೋಷ್ಟಿ ನಡೆಸಲಾಯಿತು.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಭೋವಿ ವಡ್ಡರ ಸಮಾಜದ ತಿಪ್ಪಣ್ಣಾ ವಡೆಯರ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡೂರು ಗ್ರಾಮ ಪಂಚಾಯತಿಯ ದುರ್ಗಾ ನಗರದ ಯುವತಿಯನ್ನು ರಂಗಂಪಲ್ಲಾ ನಿರ್ಜನ ಪ್ರದೇಶದಲ್ಲಿ ಅಲ್ತಾಫ್ ಎಂಬುವವನು ಆತನ ಮೂರು ಜನ ಸ್ನೇಹಿತರೊಂದಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು ಖಂಡನೀಯ, ಇಂತಹ ಕಾಮುಕರನ್ನು ಗುಂಡಿಟ್ಟು ಕೊಲ್ಲುವ ಕೆಲಸ ಸರ್ಕಾರ ಮಾಡಬೇಕು, ಈ ಬಗ್ಗೆ ಉಡುಪಿ ಜಿಲ್ಲಾ ದಂಡಾಧಿಕಾರಿಗಳು ನೊಂದ ಕುಟುಂಬಕ್ಕೆ ಭದ್ರತೆ ನೀಡಿ ಕೂಡಲೇ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಸುದ್ದಿಗೋಷ್ಟಿಯಲ್ಲಿ ಶ್ರೀಹರಿ ಜಾಧವ, ಸಿದ್ದರಾಮ ದಂಡಗೂಲಕರ, ಭಿಮಾಶಂಕರ ಭಂಕೂರ, ವಿಠ್ಠಲ ನೆಲೋಗಿ ಸೇರಿದಂತೆ ಇತರರು ಇದ್ದರು





