ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನೆಲೆ, ಭೀಮಾ ನದಿಗೆ ಬಾರಿ ಪ್ರಮಾಣ ನೀರು ಬಿಡುಗಡೆ ಯಾದ ಹಿನ್ನಲೆ ಅಫಜಲಪೂರ ಮಣ್ಣೂರ ಗ್ರಾಮದ ನದಿಯ ದಡದಲ್ಲಿನ ಯಲ್ಲಮ್ಮನ ದೇವಸ್ಥಾನ ಮುಳುಗಡೆಯಾಗಿದೆ. ಮಹಾರಾಷ್ಟ್ರದ ಉಜನಿ ಹಾಗೂ ವೀರ ಜಲಾಶಯದಿಂದ 1. 40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ದೇವಸ್ಥಾನ ಭಾಗಶಃ ಅರ್ಧ ಭಾಗ ಮುಳುಗಡೆಯಾಗಿದ್ದು, ಭೀಮಾ ನದಿ ತೀರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಜನರು ನದಿಯ ಕಡೆ ಹೋಗದಂತೆ ಹಾಗೂ ಜಾನುವಾರುಗಳನ್ನು ಬಿಡದಂತೆ ಜಿಲ್ಲಾಡಳಿತ ಸೂಚಿಸಿದೆ.
Recent Comments
ಮೇಲೆ Hello world!





