ಕಳೆದ ರಾತ್ರಿ ಸುರಿದ ಮಳೆಯಿಂದ ಶಾಲಾ ಮಕ್ಕಳು ಪರದಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಗದಗ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 01 ರಲ್ಲಿ ಸುಮಾರು 60 ಮಕ್ಕಳು ಪರದಾಟ ನಡೆಸಿದ್ದಾರೆ. ಶಾಲೆಯ ಮುಂದಿನ ಚರಂಡಿ ಬ್ಲಾಕ್ ಆಗಿರುವದರಿಂದ ಮಕ್ಕಳು ಶಾಲೆಗೆ ಒಳಗಡೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪಕ್ಕದ ಅಂಗಡಿ ಮುಂದೆ ಪಾಠವನ್ನು ಕೇಳುವ ಸ್ಥಿತಿ ನಿರ್ಮಾಣವಾಗಿತ್ತು.