ಬಹಿರ್ದೆಸೆಗೆಂದು ಹೋದ ಉದಯಕುಮಾರ ಕಾಳೆ ಎಂಬುವವರನ್ನು ಆಗಸ್ಟ್ 17, 2024 ರಂದು ಅಶೋಕನಗರ ಪೋಲೀಸ್ ಠಾಣೆಯ ಪೋಲೀಸರು ಕರೆದುಕೊಂಡು ಹೋಗಿ ಹೊಡೆ-ಬಡೆ ಮಾಡಿ ಸಾಯಿಸಿದ್ದಲ್ಲದೇ, ಅವರ ಕುಟುಂಬದವರಿಗೆ ಅನಾವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಎ. ಬಿ ಹೊಸಮನಿ ಅವರು ಆರೋಪಿಸಿದ್ದಾರೆ.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಇಮಲಾಬಾಯಿ ಎಂಬುವವರ ಗಂಡನಾದ ಉದಯಕುಮಾರ ಕಾಳೆ ಎಂಬುವವರನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅಶೋಕನಗರ ಪೋಲೀಸರು ಕರೆದುಕೊಂಡು ಹೋಗಿ ಸಾಯಿಸಿದ್ದಾರೆ, ಅದರ ಬಗ್ಗೆ ಅವರ ಕುಟುಂಬದವರು ಅಶೋಕನಗರ ಪೋಲೀಸ್ ಠಾಣೆಯ ಪಿ.ಎಸ್.ಐ ಶಿವಪ್ಪ ಕಮಾಂಡೋ, ಶಿವಲಿಂಗ ಮತ್ತು ಇತರೆ ಮೂರು ಜನರ ವಿರುಧ್ದ ಕೇಸ್ ದಾಖಲಾಗಿದೆ. ಸಿಐಡಿ ತನಿಖೆಯಾಗುತ್ತಿದೆ. ಆದರೆ ಇಲ್ಲಿಯವರೆಗೂ ಆ ಐದು ಜನ ಆರೋಪಿತರನ್ನು ಬಂಧಿಸುವ ಕೆಲಸವಾಗಿಲ್ಲ. ಅವರು ಅಶೋಕ ನಗರ ಪೋಲಿಸ್ ಠಾಣೆಯಲ್ಲೇ ಕೆಲಸ ಮಾಡುತ್ತಿದ್ದಾರೆ ಮತ್ತು ಆರೋಪಿತರ ವಿರುಧ್ದ ಚಾರ್ಜ್ ಶಿಟ್ ಕೂಡ ಸಲ್ಲಿಸಿಲ್ಲ. ಕೇಸಿನಲ್ಲಿರುವ ಆರೋಪಿತರು ಅಶೋಕ ನಗರ ಪೋಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಾ ಇದ್ದಿದ್ದಕ್ಕಾಗಿ ಅವರ ಮನೆಯು ಠಾಣೆಯ ವ್ಯಾಪ್ತಿಯಲ್ಲಿ ಬರುತ್ತಿರುವುದರಿಂದ ವಿನಾ ಕಾರಣ ಯಾವುದೇ ಪ್ರಕರಣಕ್ಕೆ ಸಂಬಂಧಿಸದೇ ಇರಲಾರದ ಪ್ರಕರಣಕ್ಕೆ ಅಶೋಕ ನಗರ ಪೋಲಿಸ್ ಠಾಣೆಯ ಪಿಎಸ್ ಐ ಬಸಲಿಂಗಪ್ಪಾ ಮತ್ತು ಐದಾರು ಜನ ಪೋಲೀಸರು ಒಂದು ಹುಡುಗನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಮನೆ ಸರ್ಚ ಮಾಡುತ್ತೇನೆಂದು ಅವರಲ್ಲಿರುವ ಬಂಗಾರವನ್ನೇ ಮನೆಯಲ್ಲಿಟ್ಟು, ನಿಮ್ಮ ಮಗ ಕಳ್ಳತನ ಮಾಡಿದ್ದಾನೆಂದು ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ





