ಉಪಾಕರ್ಮ ಆಚರಣೆ ಶಾಸ್ತ್ರಿಯ ಕಟ್ಟುಪಾಡಿನಲ್ಲಿ ನಡೆಯುವ ವಾರ್ಷಿಕ ವಿಧಿ ಎಂದು ಪಂಡಿತ ಪವನ ಆಚಾರ್ಯ ಯಾದಗಿರಿ ಹೇಳಿದರು.
ಸಮೀಪದ ಹುಣಸಗಿ ಪಟ್ಟಣದ ಮಧ್ವಭವನದಲ್ಲಿ ಸೋಮವಾರ ವಿಪ್ರ ಸಮಾಜದ ವತಿಯಿಂದ ಸಾಮೂಹಿಕ ಯಜೋಪವೀತ ಧಾರಣಾ ಉಪಾಕರ್ಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಂವತ್ಸರ ಕೃತ ದೋಷ ಪರಿಹಾರಾರ್ಥ ಅಂದರೆ ವರ್ಷವಿಡೀ ತಿಳಿದೋ, ತಿಳಿಯದೆಯೋ ಆದ ತಪ್ಪಿಗೆ ದೇವರ ಕ್ಷಮೆ ಕೋರಿ, ಅದರಿಂದ ಕಟ್ಟಿಕೊಂಡ ಪಾಪ ನಿವಾರಣೆಗಾಗಿ ವರ್ಷಕ್ಕೊಮ್ಮೆ ಈ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.





