ವಿದ್ಯುತ್ ಸ್ಪರ್ಶಿಸಿ ಯುವಕ ಸಾವು.!*ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಘಟನೆ ಜರುಗಿದೆ.
ಸಮೀಪದ ನಾಗನೂರ ಪಿಎ ಗ್ರಾಮದ ವ್ಯಕ್ತಿ ಸಂಗಪ್ಪ ತಳವಾರ್ (28) ಮೃತ್ ದುರ್ದೈವಿ, ಮೃತ ಸಂಗಪ್ಪ ತಾಂವಶಿ ಗ್ರಾಮದಲ್ಲಿರುವ ಜಮೀನನ್ನು ಪಾಲುದಾರರಾಗಿ ಮಾಡಿಕೊಂಡಿದ್ದು ಮುಂಜಾನೆ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ.
ಮೃತ ಸಂಗಪ್ಪ ಈತನಿಗೆ ಇಬ್ಬರು ಮಕ್ಕಳು, ಹೆಂಡತಿ ತಂದೆ ತಾಯಿ ಇದ್ದಾರೆ, ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ





