Home Uncategorized ಕೊಲ್ಕತ್ತಾ ವೈದ್ಯೆಯೆ ಮೇಲೆ ಅತ್ಯಾಚಾರ ,ಕೊಲೆ ಖಂಡಿಸಿ ಸೇಡಂ ವೈದ್ಯರಿಂದ ಪ್ರತಿಭಟನೆ ಮಾಡಲಾಯಿತು

ಕೊಲ್ಕತ್ತಾ ವೈದ್ಯೆಯೆ ಮೇಲೆ ಅತ್ಯಾಚಾರ ,ಕೊಲೆ ಖಂಡಿಸಿ ಸೇಡಂ ವೈದ್ಯರಿಂದ ಪ್ರತಿಭಟನೆ ಮಾಡಲಾಯಿತು

0

ಕೊಲ್ಕತ್ತಾ ವೈದ್ಯೆಯೆ ಮೇಲೆ ಅತ್ಯಾಚಾರ ,ಕೊಲೆ ಖಂಡಿಸಿ ಸೇಡಂ  ವೈದ್ಯರಿಂದ ಪ್ರತಿಭಟನೆ ಮಾಡಲಾಯಿತು

ಸೇಡಂ ಕೋಲ್ಕತ್ತಾದ ಸರಕಾರಿ ಸ್ಚಾಮ್ಯದ ಆರ್,ಜಿ,ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತರಬೇತಿ ನಿರತ ವೈದ್ಯೆಯ ಮೇಲೆ ಅಮಾನುಷವಾಗಿ ಅತ್ಯಚಾರ ನಡೆಸಿ ಕೊಲೆ ಮಾಡಿರುವದನ್ನು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಸೇಡಂ ತಾಲೂಕಾ ವೈದ್ಯರು ಪ್ರತಿಭಟನೆ ನಡೆಸಿದರು

ಸೇಡಂ ತಾಲೂಕಿನಲ್ಲಿನ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು ಭಾರತೀಯ ವೈದ್ಯರ ಸಂಘ ಹಾಗೂ ಆಯುಷ ಫೆಡರೇಶನ್ ಆಪ್ ಇಂಡಿಯಾ ಕರೆಯಂತೆ ತುರ್ತು ಸೇವೆ ಹೊರತು ಪಡಿಸಿ ಓಪಿಡಿ ಸೇವೆ ಬಂದ್ ಮಾಡಿ ಈ ಅತ್ಯಚಾರ ಘಟನೆಯನ್ನು ಖಂಡಿಸಿ  ಪಟ್ಟಣದ ಕೊತ್ತಲ ಬಸವೇಶ್ವರ  ದೇವಾಲಯದಿಂದ  ಸಹಾಯಕ ಆಯುಕ್ತ ಕಚೇರಿವರೆಗೆ ಕಾಲ್ನಡಿಗೆಯಲ್ಲಿ ರ್ಯಾಲಿಯನ್ನು ಹಮ್ಮಿಕೊಂಡ ವೈದ್ಯರು  ಕೊಲ್ಕತ್ತಾ ವೈದ್ಯೆಯ ಮೇಲಿನ ಘಟನೆ ಅತ್ಯಂತ ಭಯಾನಕವಾಗಿದೆ ಮುಂದೆ ಈ ತರಹದ ಘಟನೆಗಳು ಆಗದಂತೆ ಕಠಿಣ ಶಿಕ್ಷೆ ಕೊಡಿಸಿ ಮಹಿಳಾ ವೈದ್ಯೆರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಹಿರಿಯ ವೈದ್ಯರಾದ ಡಾ ದೇಶಪಾಂಡೆ  ಮಾತನಾಡಿ ವೈದ್ಯೆಯ ಮೇಲಿನ ಅತ್ಯಚಾರ ಹಾಗೂ ಕೊಲೆ ಘಟನೆ ಬೆಚ್ಚಿ ಬೀಳಿಸಿದೆ ಇಂತಹ ಘನಘೋರ ಕೃತ್ಯ ಮರು ಕಳಿಸದಂತೆ ಆರೋಪಿಗಳಿಗೆ  ಗಲ್ಲು ಶಿಕ್ಷೆ ಆಗಲೇ ಬೇಕು ಎಂದು ನಮ್ಮೆಲ್ಲರ ಆಗ್ರಹವಾಗಿದೆ ಎಂಸರು  ಈ ಪ್ರತಿಭಟನೆಯಲ್ಲಿ ಡಾ ಸದಾನಂದಾ ಬೂದಿ, ಡಾ ರಾಜಕುಮಾರ ನಿಡಗುಂದಾ, ಡಾ ಶ್ರೀನಿವಾಸ ಮೊಕದಮ್, ಡಾ ರಾಧಿಕಾ ಉದಯಕುಮಾರ ಶಹಾ, ಡಾ ಸದಾಶಿವ , ಡಾ ಗಾಯತ್ರಿ, ಡಾ ಪವಿತ್ರ, ಡಾ ನರಸಿಂಹರೆಡ್ಡಿ, ಡಾ ಕೃಷ್ಣವೇಣಿ, ಶಿಲ್ಪಾ ಮಠಪತಿ, ವೆಂಕಟರಾಮರೆಡ್ಡಿ, ಪ್ರಮೋದಕುಮಾರ, ಬೀಮರೆಡ್ಡಿ, ಶಶಿದರ್ ಆಗನೂರ, ವಿನೋದ ಸಂಗಾವಿ, ನಾಗರಾಜ ಕನಕೇರಿ ಸೇರಿದಂತೆ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here

error: Content is protected !!