Home Uncategorized ರೋಟರಿ ಕ್ಲಬ್ ಆಫ್ ಗುಲಬರ್ಗಾ ಮೇನ್ 3160 ; ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಆಚರಣೆ

ರೋಟರಿ ಕ್ಲಬ್ ಆಫ್ ಗುಲಬರ್ಗಾ ಮೇನ್ 3160 ; ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಆಚರಣೆ

0
ರೋಟರಿ ಕ್ಲಬ್ ಆಫ್ ಗುಲಬರ್ಗಾ ಮೇನ್  3160 ; ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಆಚರಣೆ

. ರೋಟರಿ ಕ್ಲಬ್ ಆಫ್ ಗುಲಬರ್ಗಾ ಮೇನ್ 3160 ಕಳೆದ 2023-24 ನೇ ಸಾಲಿನಲ್ಲಿ ಶ್ರೀ ಮಲ್ಲಿಕಾರ್ಜುನ ಮೇಳಕುಂದಿ ಅವರು ಆಯ್ಕೆಯಾಗಿ ಒಂದು ವರ್ಷ ಸಂಪೂರ್ಣ ಕಾರ್ಯಭಾರವನ್ನು ನಿರ್ವಹಿಸಿದರು.  ಜೂನ್ 28 ರಂದು ವರ್ಷದ ಕೊನೆಯ ಸಭೆಯನ್ನು ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ 6:30 ಕ್ಕೆ ವಿಜೃಂಭಣೆಯಿಂದ ಆಚರಿಸಿದರು.

ರೋಟರಿ ಕ್ಲಬ್ ಆಫ್ ಗುಲಬರ್ಗಾ ಮಲ್ಲಿಕಾರ್ಜುನ ಮೇಳಕುಂದಿ ಅವರ ಘನ ಅಧ್ಯಕ್ಷತೆಯಲ್ಲಿ ಕೊರಳ ಪಟ್ಟಿ ಧಾರಣೆಯೊಂದಿಗೆ ಸಭೆಯು ಪ್ರಾರಂಭವಾಯಿತು. ಈ ಸಭೆಗೆ ಡಿಸ್ಟ್ರಿಕ್ ಗವರ್ನರ್ರಾದ ಮಾಣಿಕ್ ಪವಾರ್ ಮತ್ತು ಡಾ.ಪಿ ಶಂಕರ್, ಪಿಡಿಜಿ ಮಣಿಲಾಲ್ ಶಹಾ, ಜಗದೀಶ ಮಾಲು , ಡಾ.ತಂಗಾ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮವು ಮಲ್ಲಿಕಾರ್ಜುನ ಮೇಳಕುಂದಿ ಅಧ್ಯಕ್ಷರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು. ನಂತರ ಡಾ. ಜಿಡಗೆಕರ್ ಅವರು ರೋಟರಿ ಹಾಡನ್ನು ಹಾಡಿದರು. ತದನಂತರ ಎಲ್ಲಾ ಅತಿಥಿಗಳು ಸಮಾರಂಭವನ್ನು ಉದ್ಘಾಟಿಸಿದರು, ನಂತರ ಅಧ್ಯಕ್ಷರು ಅತಿಥಿಗಳಿಗೆ ಸನ್ಮಾನಿಸಿದರು.  ತದನಂತರ ಸನ್ಮಾನ್ಯ ಅಧ್ಯಕ್ಷರಾದ ಮೇಳಕುಂದಿ ಅವರು 1974-75   ರಿಂದ  2023 ರ ವರೆಗೆ ಅಧ್ಯಕ್ಷರಾಗಿ ಕೆಲಸ ಮಾಡಿದ ಎಲ್ಲರಿಗೂ ರೋಟರಿ ಕ್ಲಬ್ ಆಫ್ ಗುಲಬರ್ಗಾ ಪರವಾಗಿ ಸನ್ಮಾನಿಸಿದರು. ಉದ್ಘಾಟಕರಾದ ಮಣಿಲಾಲ್ ಶಹಾ ಮಾತನಾಡಿದರು. ನಂತರ ಮಾಣಿಕ್ ಪವಾರ್ ಮಾತನಾಡಿದರು, ನಂತರ ಡಾ. ಪಿ . ಶಂಕರ್ ಮಾತನಾಡೊದರು. ನಂತರ ಡಾ. ತಂಗಾ ಮಾತನಾಡಿದರು. ಕೊನೆಗೆ ಕಾರ್ಯದರ್ಶಿಗಳು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here

error: Content is protected !!