Home Uncategorized ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರಿಗೆ ಹಿಂದೂ ಜಾಗೃತೆ ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು

ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರಿಗೆ ಹಿಂದೂ ಜಾಗೃತೆ ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು

0
ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರಿಗೆ ಹಿಂದೂ ಜಾಗೃತೆ ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು

ಬಕ್ರೀದ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂಧವರು ಅಕ್ರಮವಾಗಿ ಗೋವುಗಳನ್ನು ಬಲಿಕೊಡುವುದು ಹಾಗೂ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದನ್ನು ನಿಲ್ಲಿಸುವ ಕುರಿತು ಪ್ರತಿಭಟನೆ ನಡೆಸಲಾಯಿತು.

 

ಇಂದು ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರಿಗೆ ಹಿಂದೂ ಜಾಗೃತೆ ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಕಲಬುರಗಿ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಜೂನ್ 17 ರಂದು ಮುಸ್ಲೀಮರ ಬಕ್ರೀದ್ ಹಬ್ಬವಿದ್ದು ಆ ದಿನದಂದು ಅಕ್ರಮವಾಗಿ ಗೋವುಗಳನ್ನು ಬಲಿ ಕೊಡುವ ಮೂಲಕ ತಮ್ಮ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಗೋ ಹತ್ಯೇ ಮಾಡುವುದನ್ನು ಹಿಂದೂ ಜಾಗೃತಿ ಸೇನೆ ಕಲಬುರಗಿ ಉಗ್ರವಾಗಿ ಖಂಡಿಸುತ್ತದೆ ಎಂದರು. ಏಕೆಂದರೆ ನಮ್ಮ ಹಿಂದೂ ಧರ್ಮದಲ್ಲಿ ಗೋವುಗಳನ್ನು ದೇವರೆಂದು ಪೂಜಿಸಿ ತಾಯಿ ಎಂದು ಗೌರವಿಸುತ್ತೇವೆ. ಸರ್ಕಾರದ ಗೋ ಹತ್ಯೇ ಕಾಯ್ದೆ ನಿಷೇಧ ಆದೇಶ ಜಾರಿಗೆ ಇದ್ದರೂ ಕೂಡ ಕಲಬುರಗಿ ಜಿಲ್ಲೆ ಹಾಗೂ ಕಲಬುರಗಿ ನಗರದಲ್ಲಿ ಇನ್ನೂ ಕೂಡ ಅಕ್ರಮ ಕಸಾಯಿಖಾನೆಗಳು ಹಾಗೂ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡಲಾಗುತ್ತದೆ ಎಂದರು. ಇನ್ನೂ ಈ ಹಬ್ಬದ ನಿಮಿತ್ಯ ಜಿಲ್ಲೆಗೆ ಬೇರೆ ಬೇರೆ ರಾಜ್ಯಗಳಿಂದ ಹಾಗೂ ಜಿಲ್ಲೆಗಳಿಂದ, ಹಳ್ಳಿಗಳಿಂದ ಸಾವಿರಾರು ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತದೆ, ಅದೇ ರೀತಿ ಪ್ರತಿ ವರ್ಷ ತಮಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ, ಈ ವರ್ಷವೂ ಕೂಡ ರಿಂಗ್ ರಸ್ತೆಗಳಾದ , ರಾಮ ಮಂದಿರ, ನಾಗನಹಳ್ಳಿ ಕ್ರಾಸ್ , ಶಹಬಾದ್ ಕ್ರಾಸ್, ಸೇಡಂ ರೋಡ್ , ಹುಮನಾಬಾದ ರೋಡ್ , ಆಳಂದ ಚೆಕ್ ಪೋಸ್ಟ್ ,ಅಫಜಲಪುರ ರಸ್ತೆಗಳಲ್ಲಿ  ಪೋಲೀಸ್ ಚೆಕ್ ಪೋಸ್ಟ್ ಹಾಕಿ ಬಂದೋಬಸ್ತ್ ನೇಮಿಸಬೇಕು ಎಂದರು.

LEAVE A REPLY

Please enter your comment!
Please enter your name here

error: Content is protected !!